ಕರ್ನಾಟಕ

karnataka

ETV Bharat / state

ಬಿಎಸ್​ವೈ ಭೇಟಿಯಾದ ಬಿ.ಸಿ. ಪಾಟೀಲ್​... ಅಪ್ಪಿ ಸ್ವಾಗತಿಸಿದ ಆರ್​. ಅಶೋಕ್​ - ಸಿಎಂ ಭೇಟಿ ಮಾಡಿದ ಬಿ.ಸಿ ಪಾಟೀಲ್​

ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಬಿ.ಸಿ ಪಾಟೀಲ್​ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಬಿ.ಸಿ ಪಾಟೀಲ್

By

Published : Oct 26, 2019, 7:57 PM IST

ಹುಬ್ಬಳ್ಳಿ:ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆ‌ ಮುಕ್ತಾಯದ ಬಳಿಕ ಮುಖ್ಯ ಮಂತ್ರಿಯವರನ್ನು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಭೇಟಿಯಾಗಿ‌ ಮಾತುಕತೆ ನಡೆಸಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಸಿಎಂ ಭೇಟಿ ಮಾಡಿದ ಬಿ.ಸಿ ಪಾಟೀಲ್​

ಬಿಎಸ್​ವೈ ಅವರನ್ನು ಖಾಸಗಿ ಹೋಟೆಲ್​ನಲ್ಲಿ ಭೇಟಿಯಾದ ಬಿ.ಸಿ ಪಾಟೀಲ್​ ಅವರ ಜೊತೆ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟಿಲ್, ಸಂಸದ ಶಿವಕುಮಾರ ಉದಾಸಿ ಇದ್ದರು.

ಸಿಎಂ ಹಾಗೂ ಪಾಟೀಲ್​ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಅನರ್ಹ ಶಾಸಕರ ಕ್ಷೇತ್ರದ ಚುನಾವಣೆಯ ಸಿದ್ದತೆ ಹಾಗೂ ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಿಎಂ‌ ಭೇಟಿಗೂ ಮೊದಲು ಸಚಿವ ಆರ್.​ ಅಶೋಕ್​ ಅವರನ್ನು ಭೇಟಿಯಾದ ಬಿ.ಸಿ.ಪಾಟೀಲ್​ಗೆ ಅಶೋಕ್​ ಅಪ್ಪುಗೆಯ ಮೂಲಕ ಸ್ವಾಗತ ಕೋರಿದ್ದಾರೆ.

ABOUT THE AUTHOR

...view details