ಹುಬ್ಬಳ್ಳಿ:ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮಿಷನರ್ ಮತ್ತು ಡಿಸಿಪಿಯನ್ನು ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಪೊಲೀಸ್ ಕಮಿಷನರ್, ಡಿಸಿಪಿ ನಾನು ನೋಡಿಲ್ಲ: ಹೊರಟ್ಟಿ ಬೇಸರ - hubli police department issue
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ನಡುವಿನ ವಿವಾದ ಕುರಿತು ಪ್ರತಿಕ್ರಿಯಿಸಿರುವ ಎಂಎಲ್ಸಿ ಬಸವರಾಜ ಹೊರಟ್ಟಿ, ಇದು ಅತ್ಯಂತ ಬೇಸರದ ಸಂಗತಿ. ಈ ರೀತಿ ಅಧಿಕಾರಿಗಳ ಜಗಳ ನಾನು ಕೇಳಿಯೇ ಇಲ್ಲ ಎಂದಿದ್ದಾರೆ.
ಬಸವರಾಜ ಹೊರಟ್ಟಿ ಕಳವಳ
ಇನ್ನು ಇದೇ ಜಿಲ್ಲೆಯಲ್ಲೇ ಮಾಜಿ ಸಿಎಂ, ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ರೂ ಇದೆಲ್ಲಾ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಪೊಲೀಸ್ ಇಲಾಖೆಯ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.