ಕರ್ನಾಟಕ

karnataka

ETV Bharat / state

5757 ನಂಬರ್‌ನ ಅಂಬಾಸಿಡರ್‌ ಕಾರು ಬಸವರಾಜ ಹೊರಟ್ಟಿ ಅವರಿಗೆ ಲಕ್ಕಿ.. 8ನೇ ಬಾರಿ ಗೆದ್ದರೇ ರೆಕಾರ್ಡ್‌!

ಅಂಬಾಸಿಡರ್‌ನಲ್ಲಿ ಬಂದು ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಮಾತನಾಡಿ, ಮೆಚ್ಚಿನ ಅಂಬಾಸಿಡರ್ ಕಾರಿನ ಮೇಲೆ ಅದೇನೋ ಒಂದು ಭಾವನಾತ್ಮಕ ಸಂಬಂಧ. ಈ ಕಾರ್ ಮೇಲೆ ಬಹಳ ಪ್ರೀತಿಯಿದೆ. ಆ ಪ್ರೀತಿಗಾಗಿ ಇಂದು ಈ ಕಾರ್​ನಲ್ಲಿ ಬಂದಿದ್ದೇನೆ‌. ಈಗಾಗಲೇ ಅದು 8 ಲಕ್ಷ ಕಿ.ಮೀ ಓಡಿದೆ. ಎಲ್ಲರಿಗೂ 5757 ಅಂದ್ರೆ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು..

Basavaraja horatti filed nomination for mlc election
ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

By

Published : May 24, 2022, 1:59 PM IST

ಧಾರವಾಡ: ವಿಧಾನ ಪರಿಷತ್​ನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಸಹಾಯಕ ಚುನಾವಣಾಧಿಕಾರಿ ಧಾರವಾಡ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಧಾರವಾಡ ಡಿಸಿ ಕಚೇರಿಗೆ ಬೆಂಬಗಲಿಗರೊಂದಿಗೆ ಆಗಮಿಸಿದ ಅವರು ದ್ವಿಪ್ರತಿಯಲ್ಲಿ ಪ್ರತ್ಯೇಕ ನಾಮಪತ್ರಗಳನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಹೇಮಲತಾ ಹೊರಟ್ಟಿ ಸೇರಿದಂತೆ ಹಲವರು ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಸೆಟ್‌ನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಎರಡೂ ಸೆಟ್ ನಾಮಪತ್ರಗಳು ಸ್ವೀಕಾರ ಆಗಿವೆ. ಇನ್ನೊಂದು ನಾಮಪತ್ರವನ್ನು ಮೇ 26ಕ್ಕೆ ಸಲ್ಲಿಸುವೆ.

ಸಿಎಂ ಬೊಮ್ಮಾಯಿ, ಸಚಿವ ಪ್ರಲ್ಹಾದ್ ಜೋಶಿ ಸೇರಿ ಅನೇಕ ನಾಯಕರು ಬರುತ್ತಾರೆ. ದೇಶದಲ್ಲಿ ಏಳು ಸಲ ಯಾರೂ ಪರಿಷತ್‌ಗೆ ಆಯ್ಕೆಯಾಗಿ ಬಂದಿಲ್ಲ, 8ನೇ ಬಾರಿ ಆರಿಸಿ ಬಂದಲ್ಲಿ ದಾಖಲೆ ಆಗುತ್ತದೆ. ಆ ದಾಖಲೆ ಆಗಬೇಕು ಅಂತಾನೇ ಎಲ್ಲರೂ ನಮ್ಮ ಕಡೆ ಒಲವು ತೋರಿಸಿದ್ದಾರೆ ಎಂದರು.

ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ..

ಇದನ್ನೂ ಓದಿ:ಪರಿಷತ್‌ ಪ್ರವೇಶಕ್ಕೆ ಸಿಗದ ಅವಕಾಶ.. ಬಡಿಸೋ ಜಾಗದಲ್ಲಿರುವ ನಾವೇ ಊಟ ಮಾಡಲು ಕೂತರೆ ಹೆಂಗೆ?.. ಸಿಎಂ ಇಬ್ರಾಹಿಂ

ಅಂಬಾಸಿಡರ್‌ನಲ್ಲಿ ಬಂದು ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಮಾತನಾಡಿ, ಮೆಚ್ಚಿನ ಅಂಬಾಸಿಡರ್ ಕಾರಿನ ಮೇಲೆ ಅದೇನೋ ಒಂದು ಭಾವನಾತ್ಮಕ ಸಂಬಂಧ. ಈ ಕಾರ್ ಮೇಲೆ ಬಹಳ ಪ್ರೀತಿಯಿದೆ. ಆ ಪ್ರೀತಿಗಾಗಿ ಇಂದು ಈ ಕಾರ್​ನಲ್ಲಿ ಬಂದಿದ್ದೇನೆ‌.

ಈಗಾಗಲೇ ಅದು 8 ಲಕ್ಷ ಕಿ.ಮೀ ಓಡಿದೆ. ಎಲ್ಲರಿಗೂ 5757 ಅಂದ್ರೆ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು. ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು ಎನ್ನುವ ನಂಬಿಕೆ ನನ್ನದು. ಹೀಗಾಗಿ, ಆ ಕಾರು ಬಳಸುತ್ತೇನೆ ಎಂದರು.

ABOUT THE AUTHOR

...view details