ಕರ್ನಾಟಕ

karnataka

ETV Bharat / state

ಕಾಂಗ್ರೆಸಿಗರು ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ - Karnataka election

ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ಮಾಡಿದ್ದಾರೆ.

cm bommai
ಸಿಎಂ ಬೊಮ್ಮಾಯಿ

By

Published : Apr 28, 2023, 11:37 AM IST

Updated : Apr 28, 2023, 11:45 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ:ಕಾಂಗ್ರೆಸ್ ಪಕ್ಷದವರು ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ. ಮತದಾರರನ್ನು ಮತಬ್ಯಾಂಕ್ ಅಂತಾ ತಿಳಿದುಕೊಂಡು ಏನು ಬೇಕಾದರೂ ಮಾತಾನಾಡಿದರೆ ನಡೆಯುತ್ತದೆ ಅನ್ನೋ ಅಮಲಿನಲ್ಲಿ ಕಾಂಗ್ರೆಸ್​ನವರು ಇದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಹತಾಶರಾಗಿದ್ದಾರೆ. ಕಳೆದ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ. ಇನ್ನು ಕಾಂಗ್ರೆಸ್ ಅಧಿಕಾರದ ಮದದಲ್ಲಿದ್ದಾರೆ. ಜನ ಅವರಿಗೆ ಪಾಠ ಕಲಿಸಲಿದ್ದಾರೆ. ಎಲ್ಲಕ್ಕಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದು ನೋವಾಗಿದೆ.‌ ಅವರು ಕಳೆದ ಐವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಹೀಗಾಗಿ ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆದುಕೊಂಡರೆ ಅವರಿಗೆ ಶೋಭೆ ತರುತ್ತದೆ. ಇಲ್ಲದಿದ್ದರೇ ಜನ ಇಷ್ಟು ವರ್ಷ ಏನ್ ಮಾಡಿದ್ದಾರೆ ಎಂದು ಕೇಳತ್ತಾರೆ ಎಂದರು.

ಇದನ್ನೂ ಓದಿ;ಮಹಿಳೆಯರಿಗೆ ಉಚಿತ್ ಬಸ್ ಸೇವೆ ನೀಡುವ ಕಾಂಗ್ರೆಸ್​​ನ 5ನೇ ಭರವಸೆ ಅವೈಜ್ಞಾನಿಕ: ನಳಿನ್ ಕುಮಾರ್ ಕಟೀಲ್

ನರೇಂದ್ರ ಮೋದಿ ಅವರಿಗೆ ಯಾವಾಗ ಯಾವಾಗ ಬೈದಿದ್ದಾರೋ ಆಗೆಲ್ಲ ಮೋದಿ ಅವರ ಮತ ಜಾಸ್ತಿಯಾಗಿದೆ. ಈ ಹಿಂದೆ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಹೆಚ್ಚು ನಿಂದಿಸಿದ್ದರು. ಆದರೆ ಅವರು ಮೂರು ಬಾರಿ ಗೆದ್ದು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾರೆ. ಇದೀಗ ಖರ್ಗೆ ಅವರ ವಿಷ ಸರ್ಪ ಎಂಬ ಹೇಳಿಕೆ ಜನರ ಭಾವನೆಯನ್ನು ಕೆರಳುಸುತ್ತಿದೆ ಎಂದು ಹರಿಹಾಯ್ದರು.

ಇದನ್ನೂ ಓದಿ:ಮಾವನ ಪರ ಮತಬೇಟೆಗೆ ಇಳಿದ ಸ್ಮಿತಾ ರಾಕೇಶ್: ವರುಣದಲ್ಲಿ ರಂಗೇರಿದ ಚುನಾವಣಾ ಕಣ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡೋದು ಸಹಜ. ಏಕೆಂದರೆ ಅವರ ಮತಬ್ಯಾಂಕ್ ಛಿದ್ರವಾಗಿದೆ. ಅವರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತಬ್ಯಾಂಕ್ ಸರಿದು ಹೋಗಿದೆ. ಹಾಗಾಗಿ ಈಗ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್​ನ ಡ್ಯಾಂ ಒಡೆದಿದೆ ಎಂದರು.

ಇದನ್ನೂ ಓದಿ:ಮಂಗಳೂರಿನ ಪಬ್ಬಾಸ್​ನಲ್ಲಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ - ವಿಡಿಯೋ

ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪದ ಇದೆ. ಸರಿಸುಮಾರು 8 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಇದ್ದು, ಅದರ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ಮರೆಮಾಚಲು ಈ ರೀತಿಯಾಗಿ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಏನಾದರೂ ಭ್ರಷ್ಟಾಚಾರ ಆರೋಪ ಇದ್ದರೆ ಹೇಳಲಿ ಎಂದು ನೇರವಾಗಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಇದನ್ನೂ ಓದಿ:ಡಬಲ್ ಎಂಜಿನ್ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಬಿಜೆಪಿ ಮತಬೇಟೆ: ಕೇಂದ್ರದ ಪುರಸ್ಕೃತ ಯೋಜನೆ ಹಣ ಏನಾಗಿದೆ?

ಇದನ್ನೂ ಓದಿ:ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ಹತಾಶೆ, ಪ್ರಧಾನಿ ಬಾಯಲ್ಲೂ ಕಾಂಗ್ರೆಸ್ ಗ್ಯಾರಂಟಿಯದ್ದೇ ಮಾತು: ಡಿಕೆಶಿ

Last Updated : Apr 28, 2023, 11:45 AM IST

ABOUT THE AUTHOR

...view details