ಹುಬ್ಬಳ್ಳಿ: ಶಾಲೆಗಳಿಗೆ ದಸರಾ ರಜೆ 15 ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮುಂಚೆ ಒಂದು ತಿಂಗಳು ದಸರಾ ರಜೆ ಕೊಡಲಾಗುತ್ತಿತ್ತು. ಎರಡು ತಿಂಗಳ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 15 ದಿನ ರಜೆ ನೀಡಿರೋದು ಸರಿಯಲ್ಲ. ದಸರಾ ಮತ್ತು ದೀಪಾವಳಿ ಹಬ್ಬ ಎರಡೂ ಬರುತ್ತೆ. ಈ ಎರಡೂ ಹಬ್ಬ ಮುಗಿಯೋವರೆಗೆ ರಜೆ ಕೊಡಬೇಕಾಗಿತ್ತು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ದಸರಾ ರಜೆ ವಿಸ್ತರಿಸುವಂತೆ ಹೊರಟ್ಟಿ ಅವರು ಮನವಿ ಮಾಡಿದ್ದಾರೆ.