ಹುಬ್ಬಳ್ಳಿ: ಜಾತಿ ಹೋರಾಟ ಹಿಂದಿನ ಕಾಲದಿಂದಲೂ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಕುತೂಹಲ ಮೂಡಿಸಿದ ಮೂರುಸಾವಿರ ಮಠದ ಸ್ವಾಮೀಜಿ-ಹೊರಟ್ಟಿ ಭೇಟಿ! - Moorusavir Mutt
ಲಿಂಗಾಯತ ಧರ್ಮದ ಹೊರಾಟದಿಂದ ಇತ್ತೀಚೆಗೆ ಮೂರುಸಾವಿರ ಮಠದಿಂದ ದೂರು ಉಳಿದಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂದು ಮಠತಕ್ಕೆ ಭೇಟಿ ನೀಡಿದರು.
ಹುಬ್ಬಳ್ಳಿಯಲ್ಲಿರುವ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಬಳಿಕ ಈಟಿವಿ ಭಾರತ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಠ-ಮಾನ್ಯಗಳು ಮೂರು ಪಕ್ಷವನ್ನು (ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್) ಸಮವಾಗಿ ನೋಡುತ್ತಿವೆ. ಕೆಲವರು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದರು.
ಇದಕ್ಕೂ ಮುನ್ನ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಹೊರಟ್ಟಿ, ಲಿಂಗಾಯತ ಧರ್ಮ ಹೊರಾಟ ವಿಚಾರವಾಗಿ ಕೆಲವು ಅಭಿಪ್ರಾಯ ಹಂಚಿಕೊಂಡರು. ಬಸವರಾಜ್ ಹೊರಟ್ಟಿ ಲಿಂಗಾಯತ ಧರ್ಮದ ಹೊರಾಟದಿಂದ ಇತ್ತೀಚೆಗೆ ಮೂರುಸಾವಿರ ಮಠದಿಂದ ದೂರು ಉಳಿದಿದ್ದರು. ಆದರೆ, ಇಂದು ಸ್ವಾಮೀಜಿ ಹಾಗೂ ಹೊರಟ್ಟಿ ಭೇಟಿ ಕುತೂಹಲ ಮೂಡಿಸಿತ್ತು.