ಹುಬ್ಬಳ್ಳಿ :ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವಾಗ ಯಾವುದೇ ಸರ್ಕಾರ ಸ್ವ-ಪ್ರತಿಷ್ಠೆಯನ್ನು ಕೈಬಿಡಬೇಕು. ತಕ್ಷಣ ಕಾಯ್ದೆ ಹಿಂಪಡೆದರೆ ದೇಶಕ್ಕೆ ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ರೈತರ ಮೇಲೆ ಲಾಠಿ ಪ್ರಯೋಗ ಸರಿಯಲ್ಲ: ಬಸವರಾಜ್ ಹೊರಟ್ಟಿ - Hubli farmers rally
ಕೃಷಿ ಕಾಯ್ದೆ ವಿರೋಧಿಸಿ ರೈತರು ಱಲಿ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಱಲಿ ತಡೆಗಟ್ಟಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್ ನಡೆಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಜೆಡಿಎಸ್ ರೈತ ಪರ ಸಂಘಟನೆಗಳೊಂದಿಗೆ ಗ್ಲಾಸ್ಹೌಸ್ ನಿಂದ ಅಂಬೇಡ್ಕರ್ ಸರ್ಕಲ್ ಮೂಲಕ ಚೆನ್ನಮ್ಮ ಸರ್ಕಲ್ವರೆಗೂ ಱಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ವಿಷಯದಲ್ಲಿ ರಾಜಕಾರಣ ಮಾಡುವುದು ಅವಶ್ಯಕತೆ ಇಲ್ಲ. ಪ್ರಾಮಾಣಿಕತೆ ಇದ್ದವರು ರೈತರನ್ನು ಬೆಂಬಲಿಸಬೇಕು. ಕೇವಲ ರಾಜಕೀಯಕ್ಕಾಗಿ, ವೋಟಗಾಗಿ ರಾಜಕೀಯ ಮಾಡಬಾರದು ಎಂದರು.
ಕೃಷಿ ಕಾಯ್ದೆ ವಿರೋಧಿಸಿ ರೈತರು ಱಲಿ ನಡೆಸುತ್ತಿದ್ದಾರೆ. ಆದ್ರೆ ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಱಲಿ ತಡೆಗಟ್ಟಲು ಪೊಲೀಸರು ಅಶ್ರುವಾಯು ಪ್ರಯೋಗ ಲಾಠಿ ಪ್ರಯೋಗ ನಡೆಸಿರುವುದು ಸರಿಯಲ್ಲ. ಈ ಸರ್ಕಾರಗಳು ಯಾವಾಗಲು ಹೋರಾಟಗಳನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿವೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕಾಯ್ದೆಗಳು ಹಿಂಪಡೆಯಬೇಕು ಎಂದು ಹೊರಟ್ಟಿ ಒತ್ತಾಯಿಸಿದರು.