ಹುಬ್ಬಳ್ಳಿ: ಉತ್ತರಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲೊಂದಾಗಿರುವ ಮೂರು ಸಾವಿರ ಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ಧವೇ ಈಗ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದ್ದಾರೆ.
ದಿಂಗಾಲೇಶ್ವರ ಶ್ರೀಗಳ ವಿರುದ್ಧ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕಿಡಿ - Basavaraj horatti outrage against Dingaleswara Shri
ಕೆಎಲ್ಇ ಸಂಸ್ಥೆಗೆ ಭೂಮಿ ನೀಡುವ ಬಗ್ಗೆ ಎಲ್ಲಾ ಪಕ್ಷದವರು, ಮಠಾಧಿಶರು, ದೊಡ್ಡ ಸ್ವಾಮೀಜಿಗಳು ಇದ್ದಾಗಲೇ ನಿರ್ಧಾರ ಮಾಡಲಾಗಿತ್ತು. ಮೆಡಿಕಲ್ ಕಾಲೇಜು ಕಟ್ಟಲು ಕೆಎಲ್ಇ ಸಂಸ್ಥೆಗೆ ನೀಡಿದ ಭೂಮಿಯನ್ನು ಮರಳಿ ಪಡೆಯುವ ವಿಚಾರ ನಮ್ಮ ಮುಂದಿಲ್ಲ, ಇದಕ್ಕೆ ನಾವು ಉತ್ತರ ಕೊಡುವುದಿಲ್ಲ..
ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ ಉನ್ನತ ಸಮಿತಿ ಸದಸ್ಯ, ಸ್ವಾಮೀಜಿಗಳು ದೊಡ್ಡವರು. ಅವರು ಯಾವ ರಕ್ತದಲ್ಲಿ ಹುಟ್ಟಿದ್ದಾರೆ? ಎಂದು ದೊಡ್ಡ ದೊಡ್ಡ ಮಾತುಗಳನ್ನಾಡಿದ್ರೆ, ನಾನು ಉತ್ತರ ಕೊಡುವುದಿಲ್ಲ. ಮಠದಿಂದ ತಪ್ಪಾಗಿದ್ರೆ ಸರಿಪಡಿಸುತ್ತೇವೆ. ಈಗಾಗಲೇ ಮಠದ ಉನ್ನತ ಸಮಿತಿ ಸಭೆ ಕರೆಯುವಂತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹೇಳಿದ್ದೇನೆ ಎಂದರು.
ಕೆಎಲ್ಇ ಸಂಸ್ಥೆಗೆ ಭೂಮಿ ನೀಡುವ ಬಗ್ಗೆ ಎಲ್ಲಾ ಪಕ್ಷದವರು, ಮಠಾಧಿಶರು, ದೊಡ್ಡ ಸ್ವಾಮೀಜಿಗಳು ಇದ್ದಾಗಲೇ ನಿರ್ಧಾರ ಮಾಡಲಾಗಿತ್ತು. ಮೆಡಿಕಲ್ ಕಾಲೇಜು ಕಟ್ಟಲು ಕೆಎಲ್ಇ ಸಂಸ್ಥೆಗೆ ನೀಡಿದ ಭೂಮಿಯನ್ನು ಮರಳಿ ಪಡೆಯುವ ವಿಚಾರ ನಮ್ಮ ಮುಂದಿಲ್ಲ, ಇದಕ್ಕೆ ನಾವು ಉತ್ತರ ಕೊಡುವುದಿಲ್ಲ ಎಂದರು.