ಹುಬ್ಬಳ್ಳಿ :ವಿಧಾನಸೌಧದ ಮೇಲೆ ಮತ್ತೆ ಕಂಬಳಿ ಬೀಸಲಿದೆ. ಡೊಳ್ಳು ಬಾರಿಸಲಿದೆ. ಭಂಡಾರ ಹಾರಲಿದ್ದು, ಮುಂದೊಂದು ದಿನ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಧಾರವಾಡ ಮನಸೂರು ರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ಬಸವರಾಜ ದೇವರು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತಾರೆ : ಬಸವರಾಜ ದೇವರು ಭವಿಷ್ಯ
ಮುಂದೊಂದು ದಿನ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಧಾರವಾಡ ಮನಸೂರು ರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ಬಸವರಾಜ ದೇವರು ಭವಿಷ್ಯ ನುಡಿದಿದ್ದಾರೆ.
ಬಸವರಾಜ ದೇವರು
ಹುಬ್ಬಳ್ಳಿಯಲ್ಲಿ ಅನರ್ಹ ಶಾಸಕರ ತೀರ್ಪು ವಿಚಾರವಾಗಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಟಗರುಗಳಿವೆ ಎರಡು ಟಗರುಗಳಲ್ಲಿ ಒಂದು ಸೋಲಬೇಕು ಒಂದು ಗೆಲ್ಲಬೇಕು ಎಂದು ಕೆ.ಎಸ್.ಈಶ್ವರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಆದರೆ ಎರಡೂ ಟಗರುಗಳು ಸರಿಸಮವಾಗಿ ಸ್ಪರ್ಧಿಸುತ್ತವೆ. ಅವರಿಬ್ಬರಲ್ಲಿ ಸಿದ್ದರಾಮಯ್ಯ ಅವರು ಸಮರ್ಥರಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.