ಹುಬ್ಬಳ್ಳಿ: ಕಾಂಗ್ರೆಸ್ನವರಿಗೆ ಪಿಎಫ್ಐ ಯಾಕೆ ಬ್ಯಾನ್ ಮಾಡಿದ್ರಿ ಎಂದು ಕೇಳಲು ಆಧಾರವಿಲ್ಲ. ಈ ಹಿಂದೆ ಅವರೇ ಪಿಎಫ್ಐ ಮೇಲಿನ ಕೇಸ್ಗಳನ್ನು ತೆಗೆದು ಹಾಕಿದ್ರು. ಈಗ ಅದನ್ನು ಮರೆಮಾಚಲು ಆರ್ಎಸ್ಎಸ್ ಬ್ಯಾನ್ ಮಾಡುವಂತೆ ಹೇಳುತ್ತಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಆರ್ಎಸ್ಎಸ್ ದೇಶ ಪ್ರೇಮಿ ಸಂಘಟನೆ. ಬಡವರು, ಅನಾಥ ಮಕ್ಕಳು ಕಟ್ಟಿರುವ ದೀನ ದಲಿತರ ಪರವಾದ ಸಂಘಟನೆಯಾಗಿದೆ. ದೇಶದಲ್ಲಿ ಪ್ರವಾಹ ಪರಿಸ್ಥಿತಿ ಬಂದಾಗ ಮುಂದೆ ನಿಂತು ಕೆಲಸ ಮಾಡುತ್ತದೆ. ಅಲ್ಲದೇ, ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಆರ್ಎಸ್ಎಸ್ ಬ್ಯಾನ್ ಮಾಡಿ ಎಂದು ಹೇಳುವುದೇ ದೊಡ್ಡ ದುರ್ದೈವ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಕಿಡಿಕಾರಿದರು.