ಕರ್ನಾಟಕ

karnataka

ETV Bharat / state

ಪಂಚಮಸಾಲಿ ಮೀಸಲಾತಿ ವಿಚಾರ: ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ - Panchmasali reservation issue

ಪಂಚಮಸಾಲಿ ಮೀಸಲಾತಿ ವಿಚಾರ - ಜನವರಿ 12ರ ಒಳಗಾಗಿ ಸಂಪೂರ್ಣ 2ಎ ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ​ಹೊರಡಿಸಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ.

Basavajaya Mrityunjaya Swamiji
ಬಸವಜಯ ಮೃತ್ಯುಂಜಯ ಸ್ವಾಮೀಜಿ

By

Published : Jan 9, 2023, 6:56 PM IST

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ:ಜನವರಿ 12ರ ಒಳಗಾಗಿ ಸಂಪೂರ್ಣ 2ಎ ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ​ಹೊರಡಿಸಬೇಕು. ಇಲ್ಲವಾದಲ್ಲಿ ಜನವರಿ 13 ರಂದು ಶಿಗ್ಗಾಂವಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮನೆಯ ಎದುರು ಒಂದು ದಿನದ ಪ್ರತಿಭಟನೆ ನಡೆಸಲಾಗುವದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

2ಡಿ ಮೀಸಲಾತಿಯು ಗೊಂದಲ‌ ಉಂಟು ಮಾಡಿದೆ:ನಗರದದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಅವರು ಬೆಳಗಾವಿ ಅದಿವೇಶನದಲ್ಲಿ ಕೊಟ್ಟ ಮಾತು ತಪ್ಪಿದ್ದಾರೆ. ಈಗಾಗಲೇ ಅವರು ಹೇಳಿರುವ 2ಡಿ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ, 2ಡಿ ಮೀಸಲಾತಿಯು ಗೊಂದಲ‌ ಉಂಟು ಮಾಡಿದೆ. ನಮಗೆ ಸಂಪೂರ್ಣ 2ಎ ಮೀಸಲಾತಿ ಬೇಕು, ಅದರಲ್ಲಿ ಇರುವ 102 ಸಮಾಜಕ್ಕೆ ಸಿಗುವಂತಹದ ಸೌಲಭ್ಯಗಳು ಪಂಚಮಸಾಲಿ ಸಮಾಜಕ್ಕೂ ಸಿಗಬೇಕು ಎಂದು ಶ್ರೀಗಳು ಬೇಡಿಕೆ ಇಟ್ಟರು.

2ಎ ಮೀಸಲಾತಿ ಕೊಡುತ್ತೇವೆ ಎಂದು ಆರು ಬಾರಿ ಮಾತು ಕೊಟ್ಟಿದ್ದಾರೆ. ಆದರೆ, ಮಾತು ಕೊಟ್ಟ ಹಾಗೆ ಅವರು ನಡೆದುಕೊಂಡಿಲ್ಲ, ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇಬೇಕಾಗಿದೆ. ನಮ್ಮ ಸಮಾಜದ ಬಡ ಮಕ್ಕಳ ಕಣ್ಣಿರು ಒರೆಸಲು ನಾವು ಹೋರಾಟ ಮಾಡಬೇಕಿದೆ. ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು. ಡಿಸೆಂಬರ್ 29 ರವರೆಗೆ ಪರಿಪರಿಯಾಗಿ ಬೇಡಿ ಕೊಂಡು ಆಣೆ ಪ್ರಮಾಣ ಸಮಯವನ್ನ ಬೊಮ್ಮಾಯಿ ತೆಗೆದುಕೊಂಡಿದ್ದರು. ಅಂದು ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದು ಕನಸು ಇಟ್ಟುಕೊಂಡಿದ್ವಿ. ಆದರೆ, ಸಚಿವ ಸಂಪುಟವನ್ನ ನಡೆಸಿ ಹೊಸದಾಗಿ 2ಡಿ ರಚನೆ ಮಾಡುವುದಾಗಿ ಸಿಎಂ, ಕಾನೂನು ಸಚಿವರಿಂದ ಹೇಳಿಸಿದ್ದರು.

ಮೀಸಲಾತಿ ಘೋಷಣೆಗೆ ಜ.12ರ ವರೆಗೆ ಗಡುವು:ಡಿಸೆಂಬರ್ 29ರ ನಿರ್ಣಯ ಅಸ್ಪಷ್ಟತೆ ಇದೆ. ಪ್ರವರ್ಗ 2ಡಿ ಹೊಸದಾಗಿ ರಚನೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಕಾನೂನು ತಜ್ಞರನ್ನ ಸಲಹೆ ಪಡೆದುಕೊಳ್ಳಲಾಗಿದೆ. ಯಾವಾಗ ನೀತಿ ಸಂಹಿತೆ ಬರುತ್ತದೆ ಗೊತ್ತಿಲ್ಲ, ಆದ್ದರಿಂದ ಜನವರಿ 12 ತಾರೀಕಿನ ಒಳಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಒತ್ತಾಯಿಸಿದರು.

2ಡಿ ನಲ್ಲಿ ಏನೂ ಇದೆ ಎಂಬುದನ್ನು ತಿಳಿಸಬೇಕು:2ಡಿ ನಲ್ಲಿ ಏನೂ ಇದೆ ಎಂಬುದು ನಮಗೆ ತಿಳಿಸುವ ಕೆಲಸವನ್ನ ಸರ್ಕಾರ ಮಾಡಲಿ. ತಮ್ಮ ಸಚಿವರಿಂದ ಸ್ಪಷ್ಟತೆ ನೀಡಲಿ. ಸಂಕ್ರಮಣ ಒಂದು ದಿನ ಮುಂಚೆ ನಾವು ಹೋರಾಟ ಆರಂಭ ಮಾಡುತ್ತೆವೆ. ನಾವೆಲ್ಲರೂ ಸಂಕ್ರಮಣವನ್ನ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಮಾಡೋಣ. ಇದು ಬೇವು ಬೆಲ್ಲದ ಸಂಕ್ರಾಂತಿ ಆಗುವುದಿಲ್ಲ, ಹೋರಾಟದ ಸಂಕ್ರಾಂತಿ ಆಗಲಿದೆ. ಜಾತ್ರೆ ಸಮಾರಂಭ ನಮಗೆ‌ ಮುಖ್ಯ ಅಲ್ಲ, ನಮ್ಮ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮುಖ್ಯ ಎಂದರು.

ಮೀಸಲಾತಿ ಪ್ರಮಾಣ ಎಷ್ಟು ಎಂದು ಬಹಿರಂಗ ಪಡಿಸಬೇಕು:2ಎ ಮೀಸಲಾತಿಯಲ್ಲಿ ಏನೂ ಮೀಸಲಾತಿ ಸಿಗುತ್ತದೆಯೋ, ಅದೇ ಮೀಸಲಾತಿ ನಮ್ಮ ಸಮುದಾಯಕ್ಕೆ ನೀಡಬೇಕು. ನಮ್ಮ‌ ಮೀಸಲಾತಿ ಪ್ರಮಾಣ ಎಷ್ಟು ಎಂಬುದು ಬಹಿರಂಗ ಪಡಿಸಬೇಕು. ಕಾನೂನ ತಜ್ಞರೇ 2ಡಿ ಮೀಸಲಾತಿ ಕೊಡಲಿಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಲಿಂಗಾಯತ ಸಮುದಾಯದ ಒಳಜಾತಿಗಳ ಎಲ್ಲರನ್ನೂ ಒಳಗೊಂಡ ಮೀಸಲಾತಿ ನೀಡುತ್ತಿರೋ? ಅಥವಾ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುತ್ತಿದೆಯೋ ಎಂದು ಸ್ಪಷ್ಟ ಪಡಿಸಿಸಲಿ. ನಮಗೆ ಮೀಸಲಾತಿ ಘೋಷಣೆ ಮಾಡಿದ್ದು ಗೊಂದಲ ಆಗಿದೆ. ನಮಗೂ ಮೀಸಲಾತಿ ಘೋಷಣೆಯ ಆದೇಶ ಪತ್ರವನ್ನ ನೀಡಿ. ಅದನ್ನ ನಾವು ಸ್ವಾಗತ ಮಾಡಬೇಕೋ, ತಿರಸ್ಕರಿಸಬೇಕೋ ಎಂಬುದು ತೀರ್ಮಾನ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಮಾತೆ ಆಸ್ತಿ ಕಬಳಿಸಲು ಸಂಚು ಮಾಡುತ್ತಿದ್ದಾರೆ ಎಂಬುದು ಸುಳ್ಳು ಆರೋಪ: ಗಂಗಾಮಾತೆ ಸ್ಪಷ್ಟನೆ

ABOUT THE AUTHOR

...view details