ಕರ್ನಾಟಕ

karnataka

ETV Bharat / state

ಕಿಮ್ಸ್​ ವೈದ್ಯಾಧಿಕಾರಿಗಳಿಗೆ ಸನ್ಮಾನ ಮಾಡುವ ಮೂಲಕ ಬಸವ ಜಯಂತಿ ಆಚರಣೆ

ನಗರದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಎಸ್.ವಿ.ಬಿ.ಡಂಗನವರ ಪ್ರತಿಷ್ಠಾನದಿಂದ ವೈದರಿಗೆ ಬಸವ ಜಯಂತಿ ಪ್ರಯುಕ್ತ ಗೌರವ ಸಲ್ಲಿಸುವ ಮೂಲಕ ವಿಶೇಷವಾಗಿ ಬಸವ ಜಯಂತಿ ಆಚರಿಸಲಾಯಿತು.

basava-jayanti
ಕಿಮ್ಸ್​ ವೈದ್ಯಾಧಿಕಾರಿಗಳಿಗೆ ಸನ್ಮಾನ

By

Published : Apr 26, 2020, 5:36 PM IST

ಹುಬ್ಬಳ್ಳಿ:ವಿಶ್ವವನ್ನ ತಲ್ಲಣಗೊಳಿಸಿರುವ ಕೋವಿಡ್-19 ವಿರುದ್ಧ ವೈದ್ಯರು ತಮ್ಮ ಜೀವದ ಹಂಗು ತೊರೆದು ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ಕೊರೊನಾ ವಾರಿಯರ್ಸ್​ಗೆ ಎಸ್.​ವಿ.ಬಿ.ಡಂಗನವರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲೆಯಲ್ಲಿ 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡದ ಉತ್ತಮ ಚಿಕಿತ್ಸೆಯಿಂದ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಉಳಿದವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಕಿಮ್ಸ್​ ವೈದ್ಯಾಧಿಕಾರಿಗಳಿಗೆ ಸನ್ಮಾನ

ಕಿಮ್ಸ್ ನಿರ್ದೆಶಕ ಡಾ. ರಾಮಲಿಂಗಪ್ಪ, ಕಿಮ್ಸ್ ಅಧಿಕ್ಷಕ ಅರುಣಕುಮಾರ್​ ಅವರನ್ನೊಳಗೊಂಡ ವೈದ್ಯರ ತಂಡಕ್ಕೆ ಶಾಲು, ಪೇಟಾ ತೊಡಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿ ಅಭಿನಂದನೆ ಸಲ್ಲಿಸಲಾಯಿತು.

ABOUT THE AUTHOR

...view details