ಕರ್ನಾಟಕ

karnataka

ETV Bharat / state

'ಹಾಡಿದ್ದೇ ಹಾಡೋ ಕಿಸಬಾಯಿದಾಸ ಅನ್ನೋಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳ್ತಾರೆ' - ಕಾಂಗ್ರೆಸ್​ ಪಾದಯಾತ್ರೆ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ಕಿಡಿ

ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷ ಬೆಳಗಾವಿ ಸದನದ ಸಮಯ ಹಾಳು ಮಾಡಿದೆ. ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗದಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವಕಾಶ ಕೊಡೋದಿಲ್ಲ, ಇದು ದುರಂತ ಎಂದು ಬಸನಗೌಡ ಪಾಟೀಲ್ ಯತ್ನಾಳ್‌ ಬೇಸರ ವ್ಯಕ್ತಪಡಿಸಿದರು.

Basanagowda Patil sparks against Congress padaytra
Basanagowda Patil sparks against Congress padaytra

By

Published : Jan 10, 2022, 3:19 PM IST

Updated : Jan 10, 2022, 3:48 PM IST

ಧಾರವಾಡ: ಹಾಡಿದ್ದೇ ಹಾಡೋ ಕಿಸಬಾಯಿದಾಸ ಅಂತಾರಲ್ಲ ಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ. ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೆ ಬೇರೆ ಗೊತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ನಿರ್ಲಕ್ಷ್ಯ ವಿಚಾರ ಚರ್ಚಿಸಲು ಕೊನೆಗೆ ಎರಡು ದಿನ ಕೊಟ್ಟರು. ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು. ಈ ಕುರಿತ ಚರ್ಚೆಗೆ ಮೊದಲೇ ಸಮಯ ಕೊಡುವಂತೆ ಸಭಾಪತಿ ಬಳಿ ಕೇಳಿದ್ದೇನೆ ಎಂದು ಅವರು ಹೇಳಿದರು.


ಈ‌ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ. ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗದಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವಕಾಶ ಕೊಡೋದಿಲ್ಲ, ಇದು ದುರಂತ' ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

'ಹಾಡಿದ್ದೇ ಹಾಡೋ ಕಿಸಬಾಯಿದಾಸ ಅಂತಾರಲ್ಲ ಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ. ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೆ ಬೇರೆ ಗೊತ್ತಿಲ್ಲ' ಎಂದರು.

ಇದನ್ನೂ ಓದಿ: watch video: ಹುಣಸೂರು ಕಾಲುವೆಯಲ್ಲಿ ಕಾಡಾನೆಗಳ ಪರದಾಟ

'ಪಾದಯಾತ್ರೆಯಿಂದಲೂ ಇವರ ಬಣ್ಣ ಬಯಲಾಗುತ್ತಿದೆ.‌ ನಮ್ಮ ಸುದ್ದಿ ಚಾನೆಲ್‌ನವರು ರಾತ್ರಿ ನಡೆದಿದ್ದನ್ನೆಲ್ಲಾ ತೋರಿಸೋದಿಲ್ಲ. ಇದು ದುರ್ದೈವ' ಎಂದು ಬೇಸರ ಹೊರಹಾಕಿದರು.

'ಪಂಚಮಸಾಲಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿಯವರು ಸ್ಪಷ್ಟ ಭರವಸೆ ಕೊಟ್ಟಿದ್ದಾರೆ. ನಾವು ಎಲ್ಲ ಸಮುದಾಯಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ಸಮುದಾಯ 50 ಸಾವಿರ ಇದೆ. ಹಾನಗಲ್‌, ರಾಣೆಬೆನ್ನೂರನಲ್ಲಿಯೂ 50 ಸಾವಿರ ಇದ್ದಾರೆ. ಹುಬ್ಬಳ್ಳಿ-ಧಾರವಾಡ ಸೇರಿ ಉತ್ತರ ಕರ್ನಾಟಕದಲ್ಲಿ ನಾವು ಹೆಚ್ಚಿದ್ದೇವೆ. ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿ' ಎಂದು ಕೇಳಿದ್ದೇವೆ ಎಂದರು.

'ಬೊಮ್ಮಾಯಿ ನಿರ್ಣಯ ಕಾದು ನೋಡುತ್ತಿದ್ದೇವೆ'

'ಯಾರಿಗೂ ಬೆದರಿಕೆ, ಅಂಜಿಕೆ ಹಾಕಿಲ್ಲ. ನಮಗೆ ಬೊಮ್ಮಾಯಿಯವರ ಮೇಲೆ ವಿಶ್ವಾಸ ಇದೆ. ಮೀಸಲಾತಿ ಕೊಡಬೇಕೆಂಬ ಭಾವನೆ ಅವರ ಮನಸ್ಸಿನಲ್ಲಿದೆ. ಆ ದಿಕ್ಕಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಈಗ ಸಾಫ್ಟ್ ಆಗಿದ್ದೇವೆ. ಯಡಿಯೂರಪ್ಪ ಮನಸ್ಸಿನಲ್ಲಿ ಏನಿತ್ತೋ ಗೊತ್ತಿಲ್ಲ, ಅದಕ್ಕೆ ಆಗ ಬಹಳ ಹಾರ್ಡ್ ಆಗಿದ್ವಿ. ಬೊಮ್ಮಾಯಿ ನಿರ್ಣಯ ಕಾಯ್ದು ನೋಡುತ್ತಿದ್ದೇವೆ, ಬಜೆಟ್ ಪೂರ್ವದಲ್ಲಿ ಅವರು ಈಡೇರಿಸುವ ವಿಶ್ವಾಸ ಇದೆ' ಎಂದು ತಿಳಿಸಿದರು.

'ಶಾಸಕ ಅರವಿಂದ ಬೆಲ್ಲದ ಸಚಿವರಾಗಬೇಕು. ಸಚಿವರಾಗಲು ಅವರದ್ದೇ ಅರ್ಹತೆ ಇದೆ. ನಾನು ಕೇಳುತ್ತಿರೋದು ಎಲ್ಲ ಸಮುದಾಯಗಳ ನ್ಯಾಯ ಮಾತ್ರ. ಆ ನ್ಯಾಯ ಕೊಟ್ಟರೆ ಮಾತ್ರ ನಾ ಸಚಿವ ಸಂಪುಟ ಸೇರುತ್ತೇನೆ' ಎಂದು ಸ್ಪಷ್ಟಪಡಿಸಿದರು.

Last Updated : Jan 10, 2022, 3:48 PM IST

For All Latest Updates

TAGGED:

ABOUT THE AUTHOR

...view details