ಕರ್ನಾಟಕ

karnataka

ETV Bharat / state

ಪಾಲಿಕೆ, ಪೊಲೀಸರಿಗೆ ತಲೆನೋವಾದ ಪ್ರಧಾನಿ ವಿರುದ್ಧದ ಬ್ಯಾನರ್​ಗಳು! - ಹುಬ್ಬಳ್ಳಿಯ ಉಪ ನಗರ ಪೊಲೀಸ ಠಾಣೆ

ಭೀಕರ ನೆರೆಯಲ್ಲಿ ನೊಂದ ಕನ್ನಡಿಗರ ಕಣ್ಣೀರು ಒರೆಸದೆ ಈಗ ಚಂದ್ರಯಾನ ವೀಕ್ಷಣೆ ‌ಮಾಡಲು ಬಂದ ತಮಗೆ ಸ್ವಾಗತ ಎಂದು ವ್ಯಂಗ್ಯವಾಗಿ ಬರೆದಿರುವ ಬ್ಯಾನರ್​ನಲ್ಲಿ ನೆರೆ ಹಾನಿಯ ಫೋಟೋ ಕೂಡಾ ಮುದ್ರಿಸಲಾಗಿದೆ.

ಪಾಲಿಕೆ, ಪೊಲೀಸರಿಗೆ ತಲರನೋವಾದ ಪ್ರಧಾನಿ ವಿರುದ್ಧದ ಬ್ಯಾನರ್​ಗಳು

By

Published : Sep 7, 2019, 8:43 PM IST

ಹುಬ್ಬಳ್ಳಿ: ಚಂದ್ರಯಾನ ವೀಕ್ಷಣೆ ಮಾಡಲು ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ವ್ಯಂಗ್ಯ ಮಾಡಿ ಸ್ವಾಗತ ಕೋರಿರುವ ಮತ್ತೊಂದು ಬ್ಯಾನರ್ ಹುಬ್ಬಳ್ಳಿ ನಗರದಲ್ಲಿ ಕಂಡಿದೆ. ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯ ಮುಂದೆ ಈ ಬ್ಯಾನರ್ ಹಾಕಲಾಗಿದೆ.

ಪಾಲಿಕೆ, ಪೊಲೀಸರಿಗೆ ತಲೆನೋವಾದ ಪ್ರಧಾನಿ ವಿರುದ್ಧದ ಬ್ಯಾನರ್​ಗಳು

ಭೀಕರ ನೆರೆಯಲ್ಲಿ ನೊಂದ ಕನ್ನಡಿಗರ ಕಣ್ಣೀರು ಒರೆಸದೆ, ಈಗ ಚಂದ್ರಯಾನ ವೀಕ್ಷಣೆ ‌ಮಾಡಲು ಬಂದ ತಮಗೆ ಸ್ವಾಗತ ಎಂದು ವ್ಯಂಗ್ಯವಾಗಿ ಬರೆದಿರುವ ಬ್ಯಾನರ್​ನಲ್ಲಿ ನೆರೆ ಹಾನಿಯ ಫೋಟೋ ಕೂಡಾ ಮುದ್ರಿಸಲಾಗಿದೆ.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ್ ಹಾಗೂ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರು ಅವರ ಭಾವಚಿತ್ರಗಳನ್ನು ಬ್ಯಾನರ್​ನಲ್ಲಿ ಹಾಕಲಾಗಿದೆ.

ಕೈ ಮುಖಂಡರ ವಿರುದ್ಧ ದೂರು..

ಪ್ರಧಾನಿ ಮೋದಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಕೈ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿ- ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿರುದ್ಧ ಹುಬ್ಬಳ್ಳಿಯ ಉಪ ನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ವಿವಾದ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್​​ 39ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details