ಹುಬ್ಬಳ್ಳಿ:ಡ್ರಗ್ಸ್ ಜಾಲದಲ್ಲಿ ಬಂದಿಯಾಗಿರುವ ನಟಿ ಸಂಜನಾಳನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: 'ಮಾದಕ ನಟಿ' ಸಂಜನಾ ಬ್ಯಾನ್ ಮಾಡಲು ಶ್ರೀರಾಮಸೇನೆ ಆಗ್ರಹ - ಶ್ರೀರಾಮ ಸೇನೆ
ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ಬಂದಿಯಾಗಿರುವ ನಟಿ ಸಂಜನಾಳನ್ನು ಕರ್ನಾಟಕ ಚಿತ್ರಮಂಡಳಿ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು, ನಟಿ ಸಂಜನಾಳ ಭಾವಚಿತ್ರ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಜನಾ ಡ್ರಗ್ಸ್ ಜಿಹಾದ್, ಲವ್ ಜಿಹಾದ್, ಮತಾಂತರದ ಮೂಲಕ ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಾಗಿದ್ದಾಳೆ. ಇಡೀ ರಾಜ್ಯದ ಮಾನ ಹರಾಜು ಹಾಕುವ ಮೂಲಕ ಯುವ ಪೀಳಿಗೆಗೆ ಮಾರಕ ಆಗಿದ್ದಾಳೆ ಎಂದು ಕಿಡಿ ಕಾರಿದರು.
ಇಂತಹ ದೇಶದ್ರೋಹಿ, ಸಮಾಜ ದ್ರೋಹಿ ಜಿಹಾದಿ ಜಾಲದಲ್ಲಿ ನಟಿ ಸಂಜನಾ ಉರ್ಫ್ ಮಾಹಿರಾ ಭಾಗವಹಿಸಿದ್ದು, ಆತಂಕದ ಸಂಗತಿ ಈ ಹಿನ್ನೆಲೆಯಲ್ಲಿ ಆಕೆಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.