ಧಾರವಾಡ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವರುಣನ ಆರ್ಭಟಕ್ಕೆ ಇಲ್ಲಿನ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಈ ಹಳ್ಳಕೊಳ್ಳದಲ್ಲಿ ಜನರು ದುಸ್ಸಾಹಸ ಮೆರೆಯುತ್ತಿದ್ದಾರೆ.
ಇಲ್ಲಿನ ನವಲಗುಂದ ತಾಲೂಕಿನ ನಾಯಕನೂರು ಹಾಗೂ ಶಲವಡಿ ಮಾರ್ಗದಲ್ಲಿನ ಬಳೆಗೋಳ ಹಳ್ಳ ಸಂಪೂರ್ಣ ಭರ್ತಿಯಾಗಿ ಇಲ್ಲಿನ ಕಿರು ಸೇತುವೆ ಮುಳುಗಡೆಯಾಗಿದೆ. ಈ ಮುಳುಗಡೆಯಾದ ಸೇತುವೆಯ ಮೇಲೆ ಗ್ರಾಮಸ್ಥರು ಜೀವವನ್ನೂ ಲೆಕ್ಕಿಸದೇ ವಾಹನ ಚಲಾಯಿಸುವುದು, ದಾಟುವುದನ್ನು ಮಾಡುತ್ತಿದ್ದಾರೆ.
ನವಲಗುಂದ ಮುಳುಗಡೆಯಾದ ಕಿರು ಸೇತುವೆ ಸಾರ್ವಜನಿಕರ ಹುಚ್ಚು ಸಾಹಸ ಮಳೆಗಾಲದಲ್ಲಿ ಭಾರಿ ಮಳೆಗೆ ಇಲ್ಲಿನ ಹಳ್ಳ ಕೊಳ್ಳಗಳು ತುಂಬಿ ಕಿರು ಸೇತುವೆಗಳು ಜಲಾವೃತವಾಗಿ ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಹುಚ್ಚು ಸಾಹಸಕ್ಕೆ ಕೈ ಹಾಕಿ ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇದೇ ಮುಳುಗಡೆಯಾದ ಸೇತುವೆಯಲ್ಲಿ ಬಸ್ ಚಲಾಯಿಸಲಾಗಿದೆ. ಮಳೆಗಾಲದಲ್ಲಿ ಕಿರು ಸೇತುವೆ ಮುಳುಗಡೆಯಾಗುತ್ತಿದ್ದು, ಬೃಹತ್ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಓದಿ :ವಿಜಯಪುರದಲ್ಲಿ ಧಾರಾಕಾರ ಮಳೆ: ಡೋಣಿ ನದಿಯ ಹಳೇ ಸೇತುವೆ ಜಲಾವೃತ !