ಕರ್ನಾಟಕ

karnataka

ETV Bharat / state

ಸಂಜೆಯೊಳಗೆ ರಸ್ತೆ ಸರಿಪಡಿಸಿ, ಅದರ ಫೋಟೊ ಕಳುಹಿಸಿ: ಇಂಜಿನಿಯರ್​​​ಗೆ ಭೈರತಿ ಬಸವರಾಜ್​ ತಾಕೀತು - Bairathi Basavaraj ordered to engineers in hubballi

ತೋಳಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಸಮಾಧಾನ ವ್ಯಕ್ತಪಡಿಸಿ ಕೆರೆ ದಂಡೆ ಸುತ್ತ ಬೆಳೆದ ಕಳೆ ತೆಗೆಯಲು ಸೂಚಿಸಿದರು. ನಂತರ ವಾಯುವಿಹಾರಕ್ಕೆ ಬಂದವರ ಜೊತೆ ಚರ್ಚಿಸಿದರು.

Bhairati Basavaraj
ಕಾಮಗಾರಿ ಪರಿಶೀಲಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

By

Published : Jun 30, 2021, 3:49 PM IST

ಹುಬ್ಬಳ್ಳಿ:ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೋಳಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೆರೆ ದಂಡೆ ಸುತ್ತ ಬೆಳೆದ ಕಳೆ ತೆಗೆಯಲು ಸೂಚಿಸಿದ ಅವರು, ನಂತರ ವಾಯುವಿಹಾರಕ್ಕೆ ಬಂದವರ ಜೊತೆ ಚರ್ಚಿಸಿದರು.

ಕಾಮಗಾರಿ ಪರಿಶೀಲಿಸಿ ಇಂಜಿನಿಯರ್​ಗೆ ತಾಕೀತು ಮಾಡಿದ ಸಚಿವ ಭೈರತಿ ಬಸವರಾಜ್​

ಕೆರೆ ಪಕ್ಕದ ರೇಣುಕಾನಗರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮಾನಸಗಿರಿ ಕಾಲೊನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅರೆಬರೆ ಕಾಮಗಾರಿ ಗಮನಿಸಿದ ಸಚಿವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಂಜೆಯೊಳಗೆ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿ, ಅದರ ಫೋಟೊ ಕಳುಹಿಸಬೇಕು ಎಂದು ಇಂಜಿನಿಯರ್'ಗೆ ತಾಕೀತು ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಮಹೇಶ ಬುರ್ಲಿ ಇದ್ದರು.

ಓದಿ:ಮೋದಿ ತೆರಿಗೆ ನೀತಿ ಮಧ್ಯಮ ಮತ್ತು ದುಡಿಯುವ ವರ್ಗಕ್ಕೆ ಮಾರಕ: ಸಿದ್ದರಾಮಯ್ಯ

ABOUT THE AUTHOR

...view details