ಕರ್ನಾಟಕ

karnataka

ETV Bharat / state

ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಿಚಾರಣೆ: ಮಾರ್ಚ್​ 9ಕ್ಕೆ ತೀರ್ಪು - ಹುಬ್ಬಳ್ಳಿಯ ಕೆಎಲ್​ಇ ಕಾಲೇಜಿನಲ್ಲಿ ಪಾಕ್​ ಪರ ಘೋಷಣೆ ಕೂಗಿದ ವಿದ್ಯಾರ್ಥಿ

ಹುಬ್ಬಳ್ಳಿಯ ಕೆಎಲ್​ಇ ಕಾಲೇಜಿನಲ್ಲಿ ಪಾಕ್​ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು.

Accused
ಆರೋಪಿಗಳು

By

Published : Mar 5, 2020, 5:01 PM IST

ಹುಬ್ಬಳ್ಳಿ:ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾರ್ಚ್ 9ಕ್ಕೆ ತೀರ್ಪು ಕಾಯ್ದಿರಿಸಿದೆ.

ನ್ಯಾಯಾಲಯದ ಆವರಣದಲ್ಲಿ ಪೊಲೀಸ್​ ಸರ್ಪಗಾವಲು

ಕಾಶ್ಮೀರದ ಮೂವರು ವಿದ್ಯಾರ್ಥಿಗಳಿಂದ ದೇಶದ್ರೋಹ ಘೋಷಣೆ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬೆಂಗಳೂರಿನಿಂದ ಆಗಮಿಸಿದ ವಕೀಲರ ತಂಡ, ಆರೋಪಿಗಳ ಪರ ವಾದ ಮಂಡಿಸಿತು. ಮೈತ್ರೇಯಿ ಕೃಷ್ಣನ್ ನೇತೃತ್ವದ ಹತ್ತು ಜನ ವಕೀಲರ ತಂಡ ದೇಶಾದ್ಯಂತ ಈ ಹಿಂದೆ ನಡೆದ ಹಲವು ದೇಶದ್ರೋಹ ಘೋಷಣೆ ಪ್ರಕರಣಗಳ ಉದಾಹರಣೆಯನ್ನು ಈ ವೇಳೆ ಉಲ್ಲೇಖಿಸಿತ್ತು.

ಇದೇ ಸಂದರ್ಭದಲ್ಲಿ ಸರ್ಕಾರಿ ವಕೀಲೆ ಸುಮಿತ್ರಾ ಅಂಚಟಗೇರಿ ತಕರಾರು ಅರ್ಜಿ‌ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2.45 ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿತ್ತು. ನಂತರ 2-45ರ ಬಳಿಕ ಪ್ರಾರಂಭಗೊಂಡ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಕೆ.ಎನ್. ಗಂಗಾಧರ, ಮಾ.09ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ನೀಡಿದರು.

ABOUT THE AUTHOR

...view details