ಹುಬ್ಬಳ್ಳಿ :ಬ್ಯಾಗ್ ಕಳೆದುಕೊಂಡ ಮಹಿಳೆಗೆ ದಕ್ಷಿಣ ಸಂಚಾರಿ ಠಾಣೆಯ ಟ್ರಾಫಿಕ್ ಪೊಲೀಸರೋರ್ವರು ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ನಡೆದಿದೆ.
ದೀಪಾವಳಿಯಂದು ಕೇಶ್ವಾಪೂರ ನಿವಾಸಿ ಲಕ್ಷ್ಮೀ ಅಮರಾವತಿ ಎಂಬುವರು ಆಟೋದಲ್ಲಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ಸಂದರ್ಭ ಚಿಟಗುಪ್ಪಿ ಆಸ್ಪತ್ರೆ ಬಳಿಯ ತಿರುವಿನಲ್ಲಿ ಮಹಿಳೆಯ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸದ ಮಹಿಳೆ ಮಾರುಕಟ್ಟೆಗೆ ತೆರಳಿದ್ದಾರೆ. ಬಳಿಕ ಮಾರುಕಟ್ಟೆಯಲ್ಲಿ ತಮ್ಮ ಹಣವಿದ್ದ ಬ್ಯಾಗ್ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ.
ಬ್ಯಾಗ್ ಕಳೆದುಕೊಂಡವರಿಗೆ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್ ಮಹಿಳೆ ಕಳೆದುಕೊಂಡ ಬ್ಯಾಗ್ ಇದೇ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಂತೋಷ್ ಪವಾರ್ ಅವರಿಗೆ ಸಿಕ್ಕಿದೆ. ತಕ್ಷಣ ಉಪನಗರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಬಳಿಕ ಆ ಬ್ಯಾಗಿನಲ್ಲಿದ್ದ ಮೊಬೈಲ್ ಗೆ ಕರೆ ಮಾಡಿ ಬ್ಯಾಗ್ ಕಳೆದುಕೊಂಡ ಮಹಿಳೆಯ ಪತಿಗೆ ಹಿಂತಿರುಗಿಸಿದ್ದಾರೆ. ಬ್ಯಾಗ್ನಲ್ಲಿ 48 ಸಾವಿರ ರೂ. ಹಣ ಹಾಗೂ ಫೋನ್ ಇತ್ತು. ಟ್ರಾಫಿಕ್ ಪೊಲೀಸ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಕೃಷ್ಣಾ ನದಿಯಲ್ಲಿ ಸಾಹಸ... ಬೋಟ್ಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಕಬ್ಬು ಸಾಗಿಸಿದ ರೈತರು!