ಧಾರವಾಡ : ಉದ್ಯಮಿಗಳಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬಚ್ಚಾಖಾನ್ನನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನನ್ನ ಹೆಸರಿನಲ್ಲಿ ಯಾರೋ ಧಮ್ಕಿ ಹಾಕುತ್ತಿದ್ದಾರೆ - ಭೂಗತ ಪಾತಕಿ ಬಚ್ಚಾಖಾನ್
12:10 December 28
ಧಾರವಾಡದ ನ್ಯಾಯಾಲಯಕ್ಕೆ ಉಪನಗರ ಠಾಣೆ ಪೊಲೀಸರು ಭೂಗತ ಪಾತಕಿ ಬಚ್ಚಾಖಾನ್ನನ್ನು ಕರೆತರುವಾಗ, ನನ್ನ ಹೆಸರಿನಲ್ಲಿ ಯಾರೋ ಧಮ್ಕಿ ಹಾಕುತ್ತಿದ್ದಾರೆ. ಯಾರೇ ಧಮ್ಕಿ ಹಾಕಿದ್ರೂ, ಅವರನ್ನು ಒಳಗೆ ಹಾಕಿ. ಧಮ್ಕಿ ಹಾಕಿದವರ ಮೇಲೆ ಕೇಸ್ ಹಾಕಿ ಎಂದು ಹೇಳಿದ್ದಾನೆ..
ಧಾರವಾಡದ ನ್ಯಾಯಾಲಯಕ್ಕೆ ಉಪನಗರ ಠಾಣೆ ಪೊಲೀಸರು ಆತನನ್ನು ಕರೆತಂದಿದ್ದಾರೆ.
ನ್ಯಾಯಾಲಯದೊಳಗೆ ಹೋಗುವುದಕ್ಕೂ ಮುಂಚೆ ನನ್ನ ಹೆಸರಿನಲ್ಲಿ ಯಾರೋ ಧಮ್ಕಿ ಹಾಕುತ್ತಿದ್ದಾರೆ. ಯಾರೇ ಧಮ್ಕಿ ಹಾಕಿದ್ರೂ, ಅವರನ್ನು ಒಳಗೆ ಹಾಕಿ. ಧಮ್ಕಿ ಹಾಕಿದವರ ಮೇಲೆ ಕೇಸ್ ಹಾಕಿ ಎಂದು ಬಚ್ಚಾಖಾನ್ ಹೇಳಿದ್ದಾರೆ.
ಓದಿ:ಮುಂಬೈ ಮೂಲದ ಕುಖ್ಯಾತ ರೌಡಿ ಬಚ್ಚಾಖಾನ್ ಧಾರವಾಡ ನ್ಯಾಯಾಲಯಕ್ಕೆ ಹಾಜರು
ಬಚ್ಚಾಖಾಖ್ನನ್ನು ಉಪನಗರ ಠಾಣೆ ಪೊಲೀಸರು ಮೂರು ದಿನ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಯಿದೆ.