ಹುಬ್ಬಳ್ಳಿ: ನಾನು ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಬೇಕೆಂದು ಎಲ್ಲಾ ಯೋಜನೆಗಳನ್ನೂ ರೂಪಿಸಿದ್ದೇನೆ. ಫೆಬ್ರವರಿಯಲ್ಲಿ ರೈತಪರ ಹೊಸ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
'ರಾಮಮೂರ್ತಿ ವಿರುದ್ಧ ಅಭ್ಯರ್ಥಿ ಹಾಕೋಕಾಗಿಲ್ಲ, ಮೈತ್ರಿ ಬೇರೆ ಕೇಡು ಇವರ ಯೋಗ್ಯತೆಗೆ..' - ಇಂದು ಪ್ರಚಾರಕ್ಕೆ ಕೊನೆಯ ದಿನ
ಇವತ್ತು ಪ್ರಚಾರಕ್ಕೆ ಕೊನೆಯ ದಿನ. ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನ ಬೆಂಬಲ ಇದೆ ಎಂದು ಸಿಎಂ ಬಿಎಸ್ವೈ ವಿಶ್ವಾಶ ವ್ಯಕ್ತಪಡಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇವತ್ತು ಪ್ರಚಾರಕ್ಕೆ ಕೊನೆಯ ದಿನ. ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನಬೆಂಬಲ ಇದೆ. ಕಾಂಗ್ರೆಸ್-ಜೆಡಿಎಸ್ನವರು ಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ. ಆದರೆ, ಯಾವ ಕ್ಷೇತ್ರದಲ್ಲೂ ಆ ವಾತಾವರಣ ಇಲ್ಲ. ಕಾಂಗ್ರೆಸ್, ಜೆಡಿಎಸ್ನವರಿಗೆ ರಾಮಮೂರ್ತಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನೂ ನಿಲ್ಲಿಸಲಾಗಲಿಲ್ಲ. ಈ ಮೂಲಕ ಉಭಯ ಪಕ್ಷದವರು ಸೋಲೊಪ್ಪಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದರು.
ಉಪಚುನಾವಣೆ ನಂತರ ಬಿಎಸ್ವೈ ರಾಜೀನಾಮೆ ನೀಡುತ್ತಾರೆಂಬ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 9ಕ್ಕೆ ಏನಾಗುತ್ತೆ ಎಂಬುದು ನೀವೇ ನೋಡ್ತೀರಿ.. ಸಿದ್ದರಾಮಯ್ಯನವರು ಅಲ್ಲಿಯವರೆಗೂ ಕಾಯಲಿ. ಅಲ್ಲಿವರೆಗೂ ಕಾಂಗ್ರೆಸ್-ಜೆಡಿಎಸ್ನವರು ತೆಪ್ಪಗಿರಲಿ ಎಂದರು.