ಕರ್ನಾಟಕ

karnataka

ETV Bharat / state

ಕೊರೊನಾಗೆ ಮನೆ ಮದ್ದೇ ಸಾಕು : ಚಹಾ ಬಿಟ್ಟು ಕಷಾಯದ ಮೊರೆ ಹೋದ ಹುಬ್ಬಳ್ಳಿ ಮಂದಿ!

ಹೋಟೆಲ್​ಗೆ ಹೋದರೆ ಈ ಮೂದಲು ಚಹಾ ಕೇಳುತ್ತಿದ್ದ ಜನರು, ಇದೀಗ ಕಷಾಯ ಕೇಳುತ್ತಿದ್ದಾರೆ. ಹಾಗಾಗಿ ಕಷಾಯಕ್ಕೆ ಭಾರಿ ಬೇಡಿಕೆ ಬಂದಿದೆ. ಕೊರೊನಾ ಸೋಂಕು ತಡೆಗಟ್ಟಲು ಈ ಮನೆ ಮದ್ದೇ ಸಾಕು ಎನ್ನುತ್ತಿದ್ದಾರೆ ಹುಬ್ಬಳ್ಳಿ ಜನ.

Ayurveda remedies for corona
ಚಹಾ ಬಿಟ್ಟು ಕಷಾಯದ ಮೊರೆ ಹೋದ ಹುಬ್ಬಳ್ಳಿ ಮಂದಿ

By

Published : Aug 26, 2020, 6:26 PM IST

ಹುಬ್ಬಳ್ಳಿ:ಮಹಾಮಾರಿ ಕೊರೊನಾದಿಂದ ಆತಂಕಕ್ಕೊಳಗಾದ ಜನರು ಇದೀಗ ಮನೆ ಮದ್ದಿನಿಂದ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸೋಂಕಿಗೆ ಔಷಧವೇ ಇಲ್ಲ ಎಂದು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದ ಸಾರ್ವಜನಿಕರು ಇದೀಗ ಮನೆ ಮದ್ದಾಗಿರುವ ಕಷಾಯದತ್ತ ಮುಖ ಮಾಡಿದ್ದಾರೆ.

ಚಹಾ ಬಿಟ್ಟು ಕಷಾಯದ ಮೊರೆ ಹೋದ ಹುಬ್ಬಳ್ಳಿ ಮಂದಿ

ಹೌದು, ಕೋವಿಡ್‌-19 ವಿರುದ್ಧ ಹೋರಾಡಲು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕಷಾಯದ ಪಾತ್ರ ದೊಡ್ಡದು. ಹಾಗಾಗಿ ಕೊರೊನಾಗೆ ಕಷಾಯವೇ ಮದ್ದು ಎನ್ನುತ್ತಾರೆ ನಗರದ ಜನ.

ಈ ವಿಷಯ ತಿಳಿದ ಮೇಲೆ ನಗರದ ಹಲವು ಹೋಟೆಲ್​ಗಳಲ್ಲಿ ಕಷಾಯದ್ದೇ ಮಾತು. ಹೋಟೆಲ್​ಗೆ ಹೋದರೆ ಈ ಮೂದಲು ಚಹಾ ಕೇಳುತ್ತಿದ್ದ ಜನರು ಇದೀಗ ಕಷಾಯ ಕೇಳುತ್ತಿದ್ದಾರೆ. ಹಾಗಾಗಿ ಕಷಾಯಕ್ಕೆ ಭಾರಿ ಬೇಡಿಕೆ ಬಂದಿದೆ. ಪ್ರತಿ ಹೋಟೆಲ್​​ಗಳಲ್ಲಿ ದಿನಕ್ಕೆ ಸರಿಸುಮಾರು ಒಂದು ಕೆಜಿಯಷ್ಟು ಕಷಾಯದ ಪೌಡರ್​​ಅನ್ನು ಖಾಲಿ ಮಾಡುತ್ತಿವೆ.

ಚಹಾ ಬಿಟ್ಟು ಕಷಾಯದ ಮೊರೆ ಹೋದ ಹುಬ್ಬಳ್ಳಿ ಮಂದಿ

ಆರೋಗ್ಯದ ದೃಷ್ಟಿಯಿಂದ ಜನರು ಹೆಚ್ಚು ಹೆಚ್ಚು ಕಷಾಯ ಕೇಳುತ್ತಿದ್ದಾರೆ. ಇದರಿಂದ ಹೋಟೆಲ್​ ಮಾಲೀಕರು ಸಹ ಲಾಭದಲ್ಲಿದ್ದಾರೆ. ಈ ಹಿಂದೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಹಳ್ಳಿಯಲ್ಲಿ ನೆಗಡಿ, ಕೆಮ್ಮು, ಜ್ವರ ಬಂದಾಗ ಕಷಾಯ ಅಥವಾ ಶುಂಟಿ ಟೀ ಕುಡಿಯುತ್ತಿದ್ದರು. ಅದರಂತೆ ಈಗ ಕಷಾಯ ಕುಡಿಯುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ABOUT THE AUTHOR

...view details