ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಆದ್ರೆ ಸಾರ್ವಜನಿಕರು ಮಾತ್ರ ತಲೆ ಕೆಡಸಿಕೊಳ್ಳದೆ ಗುಂಪು ಗುಂಪಾಗಿ ಓಡಾಡುತ್ತಿರುವುದನ್ನು ಅರಿತ ರಮೇಶ್ ಎಂಬ ಕಲಾವಿದ ರಸ್ತೆ ಮಧ್ಯೆ ಕೊರೊನಾ ಚಿತ್ರ ಬಿಡಿಸಿ ವಿನೂತನವಾಗಿ ಜಾಗೃತಿ ಮೂಡಿಸಿದ್ದಾನೆ.
ಎಷ್ಟೇ ಹೇಳಿದ್ರೂ ಕೇಳದ ನಮ್ಮ ಜನಕ್ಕೆ ರಸ್ತೆ ಮೇಲೆ ಪೇಂಟಿಂಗ್ ಮೂಲಕ ಜಾಗೃತಿ - corona prevention
ನಗರದ ಚೆನ್ನಮ್ಮ ಸರ್ಕಲ್ ವೃತ್ತದಲ್ಲಿ ಕೊರೊನಾ ಭಯ ಬಿಡಿ, ಮನೆಯಲ್ಲೇ ಇದ್ದು ಬಿಡಿ. ಅನಗತ್ಯ ಓಡಾಟ ನಿಲ್ಲಿಸಿ, ವೈದ್ಯರಿಗೆ ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸಿ ಎಂದು ಕೊರೊನಾ ಚಿತ್ರ ಬರೆದು ಮನವಿ ಮಾಡಲಾಗಿದೆ.

ರಸ್ತೆ ಮೇಲೆ ಪೇಂಟಿಂಗ್ ಮೂಲಕ ಜಾಗೃತಿ
ನಗರದ ಚೆನ್ನಮ್ಮ ಸರ್ಕಲ್ ವೃತ್ತದಲ್ಲಿ ಕೊರೊನಾ ಭಯ ಬಿಡಿ, ಮನೆಯಲ್ಲೇ ಇದ್ದು ಬಿಡಿ. ಅನಗತ್ಯ ಓಡಾಟ ನಿಲ್ಲಿಸಿ, ವೈದ್ಯರಿಗೆ ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸಿ ಎಂದು ಕೊರೊನಾ ಚಿತ್ರ ಬರೆದು ಮನವಿ ಮಾಡಿದ್ದಾನೆ. ಸಾರ್ವಜನಿಕರು ಇನ್ನಾದ್ರೂ ಎಚ್ಚರಿಕೆಯಿಂದ ಇರಿ ಎಂದು ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾನೆ. ಕಲಾವಿದ ರಮೇಶ ಅವರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.