ಧಾರವಾಡ :ತಾಲೂಕಿನ ಹೆಬ್ಬಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕೊರೊನಾ ಕುರಿತು ಜಾಗೃತಿ ಮೂಡಿಸಲು ಜಾನಪದ ಶೈಲಿಯಲ್ಲಿ ಜಾಗೃತಿ ಗೀತೆ ರಚನೆ ಮಾಡಿದ್ದಾರೆ. ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿವಾನಂದ ಬಡಿಗೇರ ಅವರು ಗ್ರಾಮೀಣ ಭಾಗದ ಜನರಿಗೆ ತಿಳಿಯುವಂತೆ ಜಾನಪದ ಶೈಲಿಯಲ್ಲಿ ತಾವೇ ಬರೆದ ಗೀತೆ ಹಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.
ಕೊರೊನಾ ಕುರಿತು ಜಾನಪದ ಶೈಲಿಯಲ್ಲಿ ಜಾಗೃತಿ ಗೀತೆ ರಚನೆ..
ಪೊಲೀಸ್ ಹೈವೆ ಗಸ್ತು ವಾಹನದಲ್ಲಿ ಜಾಗೃತಿ ಗೀತೆಗಳನ್ನು ಹಾಕಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಜಾನಪದ ಶೈಲಿಯಲ್ಲಿ ಜಾಗೃತಿ ಗೀತೆ ರಚನೆ
ಕೊರೊನಾ ಭೀತಿ ಹಿನ್ನೆಲೆ ಜನರನ್ನು ಜಾಗೃತಗೊಳಿಸಲು ಪೊಲೀಸ್ ಇಲಾಖೆ ಸಹ ಮುಂದಾಗಿದೆ. ಪೊಲೀಸ್ ಹೈವೆ ಗಸ್ತು ವಾಹನದಲ್ಲಿ ಜಾಗೃತಿ ಗೀತೆಗಳನ್ನು ಹಾಕಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.