ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಪ್ರಮುಖ ಕ್ರಮ. ಅದರಂತೆ ನಗರದ ಮಹಿಳೆ ಮನೆಯಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮದ್ದು ತಯಾರಿಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕೊರೊನಾಗೆ ಮನೆ ಮದ್ದು: ಹುಬ್ಬಳ್ಳಿ ಮಹಿಳೆಯಿಂದ ಜಾಗೃತಿ - ಧಾರವಾಡದಲ್ಲಿ ಕೊರೊನಾ ಪ್ರಕರಣ
ಹಿರಿಯರು ಮನೆ ಮದ್ದು ತಯಾರಿಸಿ ಕುಡಿಯುತ್ತಿದ್ದರು. ಆದ್ದರಿಂದ ಕೊರೊನಾ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಮನೆಯಲ್ಲೇ ಔಷಧ ತಯಾರಿಸಿ ಕುಡಿಯಿರಿ ಎಂದು ಹುಬ್ಬಳ್ಳಿಯ ಮಹಿಳೆಯೊಬ್ಬರು ಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಅಕ್ಷಯ್ ಪಾರ್ಕ್ ನಿವಾಸಿ ಐರಿನ್ ಎಂಬುವವರು ಕೊರೊನಾಗೆ ಮುಂಜಾಗ್ರತಾ ಮದ್ದು ತಯಾರಿಸಿ ವಿಡಿಯೋ ಮಾಡಿ ಜನರಲ್ಲಿರುವ ಭಯ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೊರೊನಾಗೆ ರೋಗ ನಿರೋಧಕ ಶಕ್ತಿಗೆ ಮದ್ದು ಎಂದು ತಿಳಿದಿರುವ ಐರಿನ್ ಅದಕ್ಕಾಗಿ ನಿಂಬೆ ಹಣ್ಣು, ದಾಲ್ಚಿನಿ, ಮೆಣಸು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬಳಸಿಕೊಂಡು ಚೆನ್ನಾಗಿ ಕುದಿಸಿ ಮುಂಜಾನೆ ಸಂಜೆ ಕುಡಿಯಲು ತಿಳಿಸಿದ್ದಾರೆ.
ಹೀಗೆ ಮೂರರಿಂದ ನಾಲ್ಕು ದಿನಗಳ ಮದ್ದು ಸೇವನೆ ಮಾಡಿದರೆ ಕೆಮ್ಮು, ನೆಗಡಿ, ಜ್ವರ ಎಲ್ಲವೂ ಕಡಿಮೆಯಾಗುವುದು. ಈ ದೆಸೆಯಲ್ಲಿ ನಗರದ ಜನತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮನೆಯಲ್ಲಿ ಮದ್ದು ಮಾಡಿ ಆರೋಗ್ಯವಾಗಿರಬೇಕೆಂದು ಮನವಿ ಮಾಡಿದ್ದಾರೆ.