ಕರ್ನಾಟಕ

karnataka

ETV Bharat / state

ಮನೆಯಿಂದಲೇ ಮತ ಹಾಕುವ ಬಗ್ಗೆ ಜಾಗೃತಿ ಮೂಡಿಸಿದ ಚುನಾವಣಾ ಅಧಿಕಾರಿ.. - voting from home

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ.

voting from home
ಚುನಾವಣಾ ಅಧಿಕಾರಿ ಅಶೋಕ್ ತೇಲಿ

By

Published : Apr 1, 2023, 9:43 PM IST

ಮನೆಯಿಂದಲೇ ಮತ ಹಾಕುವ ಬಗ್ಗೆ ಜಾಗೃತಿ ಮೂಡಿಸಿದ ಚುನಾವಣಾ ಅಧಿಕಾರಿ ಅಶೋಕ್ ತೇಲಿ

ಧಾರವಾಡ:ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ನೀಡಿದೆ ಎಂದು ಮತದಾರರಿಗೆ ಧಾರವಾಡ ಗ್ರಾಮೀಣ ಮತಕ್ಷೇತ್ರ-71ರ ಚುನಾವಣಾ ಅಧಿಕಾರಿ ಅಶೋಕ್ ತೇಲಿ ಹೇಳಿದರು.

ನಗರದ ಮದಿಹಾಳದಲ್ಲಿರುವ 86 ವರ್ಷ ಮೇಲ್ಪಟ್ಟ ಶಾರದಾಬಾಯಿ ರಂಗನಾಥ ಕುಲಕರ್ಣಿ ಮತ್ತು ಸಂಪೂರ್ಣ ವಿಶೇಷಚೇತನ 27 ವರ್ಷದ ಚೇತನ್ ಬಿಕ್ಕನ್ನವರ ಮನೆಗೆ ಭೇಟಿ ನೀಡಿದರು. ಮನೆಯಿಂದಲೇ ಮತ ಹಾಕುವ ಒಪ್ಪಿಗೆ ಪತ್ರ ನೀಡಿ ಅದರ ಬಗ್ಗೆ ಮಾಹಿತಿ ತಿಳಿಸಿದರು.

ಭಾರತ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ಮತದಾನದ ಹಕ್ಕು ಸಮರ್ಪಕವಾಗಿ ಕಲ್ಪಿಸಲು ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಪ್ರಥಮ ಬಾರಿಗೆ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನೀಡಿತ್ತು. ಈಗ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಅವಕಾಶವನ್ನು 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ನೀಡಿದೆ.

ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು: ಒಟ್ಟು 20 ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹ

ಧಾರವಾಡದಲ್ಲಿ ವಿಶೇಷಚೇತನ ಮತದಾರರು ಎಷ್ಟು?:ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 2293- ಪುರುಷ ಹಾಗೂ 2673- ಮಹಿಳಾ ಸೇರಿ ಒಟ್ಟು 4966 ಮತದಾರರಿದ್ದಾರೆ. 2128- ಪುರುಷ ಹಾಗೂ 1447- ಮಹಿಳಾ ಸೇರಿ ಒಟ್ಟು 3575- ವಿಶೇಷಚೇತನ ಮತದಾರರಿದ್ದಾರೆ. ಈ ಎಲ್ಲ ಮತದಾರರಿಗೆ ಬಿಎಲ್‍ಓಗಳ ಮೂಲಕ 12ಡಿ ಅರ್ಜಿ ನಮೂನೆಯನ್ನು ತಲುಪಿಸಿ ಅವರು ಮನೆಯಿಂದಲೇ ಮತದಾನ ಮಾಡುವ ಅಥವಾ ಮತಗಟ್ಟೆಗೆ ಬಂದು ಮತ ಹಾಕುವ ಕುರಿತು ಒಪ್ಪಿಗೆ ಪತ್ರವನ್ನು ಪಡೆಯಲಾಗುತ್ತಿದೆ.

ಇದನ್ನೂ ಓದಿ:ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ: ಅಧಿಕಾರಿಗಳ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಗರಂ

ಮನೆಯಿಂದಲೇ ಮತದಾನ ಮಾಡುವ ಅವಕಾಶ:ಮನೆಯಿಂದಲೇ ಮತದಾನ ಮಾಡುವ ಕುರಿತು ಒಪ್ಪಿಗೆ ನೀಡಿದ ಮತದಾರರಿಗೆ ಭಾರತ ಚುನಾವಣಾ ಆಯೋಗ ನೀಡಿರುವ ನಿಯಮಾವಳಿಯಂತೆ ಸೂಕ್ತ ಭದ್ರತೆಯೊಂದಿಗೆ, ನಿಗದಿಪಡಿಸಿದ ಅಧಿಕಾರಿಗಳ, ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಗೌಪ್ಯ ಮತದಾನ ಪಡೆಯಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಯನ್ನು ವಿಡಿಯೋಗ್ರಾಫಿ ಮಾಡಿಸಲಾಗುತ್ತದೆ. ಭಾರತ ಚುನಾವಣಾ ಆಯೋಗ ಪ್ರತಿಯೊಬ್ಬ ಮತದಾರ ತಮ್ಮ ಹಕ್ಕನ್ನು ನ್ಯಾಯೋಚಿತವಾಗಿ ಚಲಾಯಿಸಲು ಅನುವಾಗುವಂತೆ ಈ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು: ಒಟ್ಟು 20 ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹ

ಇದನ್ನೂ ಓದಿ:ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್: ರಾಜಕೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರ ಹೀಗಿದೆ

ABOUT THE AUTHOR

...view details