ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಅಧಿಕಾರಿಗಳಿಂದ ಜಾಗೃತಿ - ಹುಬ್ಬಳ್ಳಿ ಲೆಟೆಸ್ಟ್ ನ್ಯೂಸ್

ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಾಲೂಕಿನ ಮಿಶ್ರಿಕೋಟಿ, ಚಳಮಟ್ಟಿ, ಉಗ್ನಿಕೇರಿ, ಕಾಮಧೇನು ಹಾಗೂ ಹಾರೋಗೇರಿ ಗ್ರಾಮದಲ್ಲಿ ಮಿಶ್ರಿಕೋಟಿ ಪ್ರಾಥಮಿಕ ಆರೋಗ್ಯ ಅಧಿಕಾರಿ ಡಾ. ಎಂ.ಆರ್. ನೂಲ್ವಿ ಜನಜಾಗೃತಿ ಮೂಡಿಸಿ, ವೈರಸ್ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.

Awareness about Covid19 in Hubli
ಹುಬ್ಬಳ್ಳಿ: ಕೋವಿಡ್ 19 ಬಗ್ಗೆ ಜಾಗೃತಿ

By

Published : Mar 24, 2020, 1:14 PM IST

ಹುಬ್ಬಳ್ಳಿ: ಕೊರೊನಾ ಭೀತಿ ಹಿನ್ನಲೆಯಲ್ಲಿ ತಾಲೂಕಿನ ಮಿಶ್ರಿಕೋಟಿ, ಚಳಮಟ್ಟಿ, ಉಗ್ನಿಕೇರಿ, ಕಾಮಧೇನು ಹಾಗೂ ಹಾರೋಗೇರಿ ಗ್ರಾಮದಲ್ಲಿ ಮಿಶ್ರಿಕೋಟಿ ಪ್ರಾಥಮಿಕ ಆರೋಗ್ಯ ಅಧಿಕಾರಿ ಡಾ. ಎಂ.ಆರ್. ನೂಲ್ವಿ ಜನಜಾಗೃತಿ ಮೂಡಿಸಿದ್ರು.

ಹುಬ್ಬಳ್ಳಿ: ಕೋವಿಡ್ 19 ಬಗ್ಗೆ ಅಧಿಕಾರಿಗಳಿಂದ ಜಾಗೃತಿ

ವೈರಸ್​ನ ಲಕ್ಷಣಗಳನ್ನು ಜನರಿಗೆ ತಿಳಿಸಿದ ಅವರು, ವೈರಸ್ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಅಲ್ಲದೇ ಇದೇ ವೇಳೆ ಊರಲ್ಲಿನ ಹೋಟೆಲ್, ಬೇಕರಿ ಹಾಗೂ ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿ ಕರೆದ ಪದಾರ್ಥಗಳನ್ನು ಮಾರಾಟ ಮಾಡದಂತೆ ಸೂಚಿಸಿದ್ರು.

ಆದಷ್ಟು ಗುಂಪು-ಗುಂಪಾಗಿ ಸೇರುವುದನ್ನು ತಡೆಯಬೇಕು, ಒಬ್ಬರಿಂದ ಇನ್ನೊಬ್ಬರು ಅಂತರ ಕಾಯ್ದುಕೊಳ್ಳುವುದು, ಪ್ರತಿ ಅರ್ಧ ಗಂಟೆಗೊಮ್ಮೆ ಕೈತೊಳೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಫಾರ್ಮಸಿ ಅಧಿಕಾರಿ ಕೃಷ್ಣ ಉದೋಜಿ, ತಿರಕಪ್ಪ ಭವಾನಿ, ಕರಿಯಪ್ಪ ಹೊನ್ನಣ್ಣವರ ಹಾಗೂ ಈರಪ್ಪ ನಾಯ್ಕರ್​ ಇದ್ದರು.

ABOUT THE AUTHOR

...view details