ಧಾರವಾಡ:ನಗರದಲ್ಲಿ ಆಟೋ ಎಲ್ಪಿಜಿ ಬಂಕ್ನ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಜನ್ನತ್ ನಗರದ ಆಟೋ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಆಟೋ ಎಲ್ಪಿಜಿ ಬಂಕ್ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಚಾಲಕರಿಂದ ಪ್ರತಿಭಟನೆ - ಜಿಲ್ಲಾಧಿಕಾರಿ ದೀಪಾ ಚೋಳನ್
ಧಾರವಾಡದಲ್ಲಿ ಆಟೋ ಎಲ್ಪಿಜಿ ಬಂಕ್ ಸಮಸ್ಯೆ ನಿವಾರಿಸಿ ಎಂದು ಜನ್ನತ್ ನಗರದ ಆಟೋ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಆಟೋ ಚಾಲಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದಲ್ಲಿ 2-3 ಆಟೋ ಎಲ್ಪಿಜಿ ಬಂಕ್ ತೆರೆಯಬೇಕು. 15 ವರ್ಷ ಮೇಲ್ಪಟ್ಟ ಆಟೋಗಳನ್ನು ರದ್ದುಪಡಿಸಿದ ಆಟೋಗಳಿಗೆ ಬೆಂಗಳೂರು ಮಾದರಿಯಾಗಿ 30 ಸಾವಿರ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ಮಳೆಯಿಂದ ಹಾಳಾಗಿರುವ ಗುಂಡಿ ರಸ್ತೆಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.