ಕರ್ನಾಟಕ

karnataka

ETV Bharat / state

ಯುವತಿಯ ನಗ್ನ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್: ಆಟೋ ಡ್ರೈವರ್​ ಬಂಧನ - ನಗ್ನ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್

ಯುವತಿ ಮನೆಗೆ ನುಗ್ಗಿ ಬೆದರಿಸಿ ಆಕೆಯ ನಗ್ನ ವಿಡಿಯೋ ಮಾಡಿ 25 ಲಕ್ಷ ಹಣ ನೀಡುವಂತೆ ಬ್ಲಾಕ್​ಮೇಲ್​ ಮಾಡಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

auto driver arrested in blackmail case
ಆಟೋ ಚಾಲಕ ಅನಿಲರಾಜ ಡೋಂಗ್ರೆ

By

Published : Mar 26, 2021, 9:55 AM IST

ಹುಬ್ಬಳ್ಳಿ:ಯುವತಿಯ ನಗ್ನ ವಿಡಿಯೋ ಚಿತ್ರೀಕರಿಸಿ 25 ಲಕ್ಷ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದಡಿ ಆಟೋ ಚಾಲಕ ಅನಿಲರಾಜ ಡೋಂಗ್ರೆ ಎಂಬಾತನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕ ಅನಿಲರಾಜ ಡೋಂಗ್ರೆ
ಮನೆಯಲ್ಲಿ ಯುವತಿ ಒಬ್ಬಳೇ ಇದ್ದಾಗ ಮನೆಗೆ ಬಂದಿದ್ದ ಡೋಂಗ್ರೆ ಚಾಕುವಿನಿಂದ ಬೆದರಿಸಿ, ಆಕೆಯನ್ನು ನಗ್ನಗೊಳಿಸಿದ್ದ. ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಹೇಳಿ ನಾಲ್ಕು ತೊಲೆ ಬಂಗಾರ ದೋಚಿದ್ದ. ಅಲ್ಲದೇ, 25 ಲಕ್ಷ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ. ಈ ಕುರಿತು ಯುವತಿಯ ತಾಯಿ ಹಳೇ ಹುಬ್ಬಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದರು. ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details