ಕರ್ನಾಟಕ

karnataka

ETV Bharat / state

ಪ್ರಯಾಣಿಕನಿಗೆ ಚಾಕು ತೋರಿಸಿ ಸುಲಿಗೆ: ಆಟೋ ಚಾಲಕನ ಬಂಧನ - ಹುಬ್ಬಳ್ಳಿ ಉಪನಗರ ಠಾಣೆ

ಪ್ರಯಾಣಿಕರೊಬ್ಬರಿಗೆ ಚಾಕು ತೋರಿಸಿ ಸುಲಿಗೆ ಮಾಡಿದ ಆಟೋ ಚಾಲಕನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

a-passenger-was-extorted-with-a-knife-in-hubballi
ಪ್ರಯಾಣಿಕರಿಗೆ ಚಾಕು ತೋರಿಸಿ ಸುಲಿಗೆ ಮಾಡಿದ್ದ ಆಟೋ ಚಾಲಕನ ಬಂಧನ

By

Published : Oct 2, 2022, 10:16 PM IST

ಹುಬ್ಬಳ್ಳಿ : ಮಧ್ಯರಾತ್ರಿ ಪ್ರಯಾಣಿಕನಿಗೆ ಚಾಕು ತೋರಿಸಿ ಸುಲಿಗೆ ಮಾಡಿದ್ದ ಆಟೋ ಚಾಲಕನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಎಂಬಾತನೇ ಬಂಧಿತ ಆರೋಪಿ.

ಬಂಧಿತ ಆರೋಪಿಯು ಕಳೆದ ಸೆ‌.23ರಂದು ರಾತ್ರಿ ಆಟೋ ಹತ್ತಿದ ಪ್ರಯಾಣಿಕರೊಬ್ಬರಿಗೆ ಚಾಕು ತೋರಿಸಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡಿದ್ದ. ಈ ಸಂಬಂಧ ಹರಿಮೋಹನ್ ಎಂಬ ವ್ಯಕ್ತಿ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪನಗರ ಠಾಣೆ ಇನ್ಸ್​ಪೆಕ್ಟರ್ ರವಿಚಂದ್ರ ಬಡಫಕೀರಪ್ಪನವರ್ ಆಟೋ ಚಾಲಕ ಅಬ್ದುಲ್​​ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಲಿಗೆ ಮಾಡಿದ್ದ ಹಣ, ಮೊಬೈಲ್, ಬೆದರಿಸಲು ಉಪಯೋಗಿಸಿದ್ದ ಚಾಕು ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ :ಹಣದಾಸೆಗೆ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮಾರಿದ ತಾಯಿ.. ಬಾಲಕಿಯೇ ಬಿಚ್ಚಿಟ್ಟಳು ಅಮ್ಮನ ಕೃತ್ಯ

ABOUT THE AUTHOR

...view details