ಹುಬ್ಬಳ್ಳಿ: ಔರಾದ್ಕರ್ ವರದಿ ಪ್ರಕಾರ ಮುಂದಿನ ತಿಂಗಳಿನಿಂದ ವೇತನ ಜಾರಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಔರಾದ್ಕರ್ ವರದಿಯಂತೆ ಮುಂದಿನ ತಿಂಗಳಿನಿಂದ ಹೊಸ ವೇತನ ಜಾರಿ: ಬಸವರಾಜ್ ಬೊಮ್ಮಾಯಿ - ಹುಬ್ಬಳ್ಳಿ ಸುದ್ದಿ
ಔರಾದ್ಕರ್ ವರದಿ ಪ್ರಕಾರ ಮುಂದಿನ ತಿಂಗಳಿನಿಂದ ಹೊಸ ವೇತನ ಜಾರಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ
ನಗರದ ವಿಮಾನ ನಿಲ್ದಾಣ ಬಳಿ ಮಾತನಾಡಿ ಈ ವಿಷಯ ತಿಳಿಸಿದರು. ಇನ್ನು, ವಿವಾದಿತ ಅಯೋಧ್ಯೆ ಸುಪ್ರೀಂಕೋರ್ಟ್ ತೀರ್ಪು ಸರ್ವ ಸಮ್ಮತವಾಗಿದ್ದು, ತೀರ್ಪನ್ನ ಎಲ್ಲರೂ ಒಪ್ಪಿದ್ದಾರೆ. ಎರಡು ಕೋಮುಗಳ ಮಧ್ಯೆ ಇದ್ದ ಆತಂಕ ದೂರವಾಗಿದೆ. ವಿವಾದಿತ ಬಾಬ್ರಿ ಮಸೀದಿ ಹಾಗೂ ರಾಮ ಜನ್ಮಭೂಮಿ ತೀರ್ಪು ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಹಳ ಅಚ್ಚುನಿಟ್ಟಾಗಿ ಭದ್ರತಾ ವ್ಯವಸ್ಥೆಯನ್ನು ನಿಭಾಯಿಸಿದೆ ಎಂದರು.
ದೇಶದ ಜನರು ತೀರ್ಪನ್ನು ಸಹಮತದಿಂದ ಸ್ವೀಕರಿಸಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ರು.