ಕರ್ನಾಟಕ

karnataka

ETV Bharat / state

ಯುವಕನಿಗೆ ಮೂವರಿಂದ ಥಳಿತ: ಸ್ಥಳೀಯರ ಮೊಬೈಲ್​​ನಲ್ಲಿ ದೃಶ್ಯ ಸೆರೆ - ಹಾಡಹಗಲೇ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ

ಧಾರವಾಡದಲ್ಲಿ ಯುವಕರ ಗುಂಪೊಂದು ಮತ್ತೊಬ್ಬ ಯುವಕನ ಮೇಲೆ ಹಲ್ಲೆ ನಡೆಸಿದೆ. ಸ್ಥಳೀಯರ ಮೊಬೈಲ್​​ನಲ್ಲಿ ದೃಶ್ಯ ಸೆರೆಯಾಗಿದೆ.

attack on young man in dharwad
attack on young man in dharwad

By

Published : Nov 26, 2022, 3:29 PM IST

Updated : Nov 26, 2022, 3:34 PM IST

ಧಾರವಾಡ:ಮೂವರು ಯುವಕರು ಸೇರಿಕೊಂಡು ಮತ್ತೊಬ್ಬ ಯುವಕನ ಮೇಲೆ ಹಾಡಹಗಲೇ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿರುವ ಘಟನೆ ಬಾಸೆಲ್ ಮಿಶನ್ ಹೆಬ್ರಿಕ್ ಮೆಮೋರಿಯಲ್ ಚರ್ಚ್ ಬಳಿ ಇಂದು ನಡೆದಿದೆ.

ಈ ಹಲ್ಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದರೆ, ಮೂವರು ಯುವಕರು ಸೇರಿಕೊಂಡು ಒಬ್ಬ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ಆತ ಕೆಳಗಡೆ ಬಿದ್ದರೂ ಬಿಡದ ಆ ಮೂರೂ ಜನ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಥಳಿತದ ವಿಡಿಯೋ

ಹಲ್ಲೆ ಮಾಡುತ್ತಿದ್ದ ದೃಶ್ಯವನ್ನು ನೋಡುತ್ತ ನಿಂತಿದ್ದವರನ್ನು ಬೆದರಿಸಿದ ಆ ಮೂರು ಜನ ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಲ್ಲೆ ಮಾಡಿದವರ ಪತ್ತೆಗೆ ಜಾಲ ಬೀಸಿದ್ದಾರೆ.

ಇದನ್ನೂ ಓದಿ:ಬಸ್​ ಸೌಕರ್ಯ ಕಲ್ಪಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿಗೆ ಮಕ್ಕಳ ಮನವಿ

Last Updated : Nov 26, 2022, 3:34 PM IST

ABOUT THE AUTHOR

...view details