ಹುಬ್ಬಳ್ಳಿ: ನಗರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಇಲ್ಲದೆ ಬಿಕೋ ಎನ್ನುತ್ತಿದೆ.
ಸಹಾಯಕ ನಿರ್ದೇಶಕರ ಕಚೇರಿ ಖಾಲಿ ಖಾಲಿ: ಸಾರ್ವಜನಿಕರ ಪರದಾಟ - ಹುಬ್ಬಳ್ಳಿ ಆಹಾರ, ನಾಗರಿಕ ಸರಬರಾಜು ನಿರ್ದೇಶಕರ ಕಚೇರಿ ಖಾಲಿ ಖಾಲಿ
ಹುಬ್ಬಳ್ಳಿ ನಗರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಇಲ್ಲದೇ ಖಾಲಿ ಖಾಲಿ ಹೊಡೆಯುತ್ತಿದೆ. ಇದರಿಂದ ಪಡಿತರ ಚೀಟಿಗಾಗಿ ಆಗಮಿಸುವ ಸಾರ್ವಜನಿಕರು ಪರದಾಡುವಂತಾಗಿದೆ.
ಸಹಾಯಕ ನಿರ್ದೇಶಕರ ಕಚೇರಿ ಖಾಲಿ ಖಾಲಿ
ಕಚೇರಿಯಲ್ಲಿ ಸರ್ವರ್ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಪಡಿತರ ಚೀಟಿ ವಿತರಣೆ ಮಾಡಬೇಕಾದ ಸಿಬ್ಬಂದಿ ಕಚೇರಿಗೆ ಆಗಮಿಸುತ್ತಿಲ್ಲ. ಈ ಬಗ್ಗೆ ಕೇಳಿದ್ರೆ ಸರ್ವರ್ ಸಮಸ್ಯೆಯ ನೆಪ ಹೇಳುತ್ತಿದ್ದಾರೆ.
ಹೀಗಾಗಿ ದೂರದೂರುಗಳಿಂದ ಪಡಿತರ ಚೀಟಿಯ ಕೆಲಸಗಳಿಗಾಗಿ ಕಚೇರಿಗೆ ಆಗಮಿಸುವ ಸಾರ್ವಜನಿಕರು ಪರದಾಡುವಂತಾಗಿದೆ.
Last Updated : Feb 7, 2020, 10:46 PM IST