ಹುಬ್ಬಳ್ಳಿ: ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಪ್ರವೇಶ ಕೊಡಿಸುವುದಾಗಿ 8.85 ಲಕ್ಷ ವಂಚನೆ ಮಾಡಿದ ಪ್ರಕರಣ ಅಸ್ಸೋಂ ರಾಜ್ಯದ ಕೊಕ್ರಝಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸದ್ಯ ಕೇಸ್ ವಿಚಾರಣೆಗಾಗಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.
ಅಸ್ಸೋಂ ರಾಜ್ಯದ ಸುರೇಶ್ ಗೋವಿಂದರಾಜ ಯೆರಮಶೆಟ್ಟಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಹುಬ್ಬಳ್ಳಿಯ ರೋಹಿತ್ ಕುಮಾರ ಕಲಾಸ್ಕರ್ ಎಂಬುವವರು ದೂರು ದಾಖಲಿಸಿದ್ದಾರೆ.