ಹುಬ್ಬಳ್ಳಿ:ಎಎಸ್ಐ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಗೋಳ ತಾಲ್ಲೂಕಿನ ಗುಡಿಗೇರಿಯಲ್ಲಿ ನಡೆದಿದೆ. ಗುಡಗೇರಿ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54) ಆತ್ಮಹತ್ಯೆ ಮಾಡಿಕೊಂಡ ಎಎಸ್ಐ ಆಗಿದ್ದಾರೆ.
ರಾತ್ರಿ ಪಾಳಿ ಕೆಲಸ ಮುಗಿಸಿ ವಸತಿ ಗೃಹಕ್ಕೆ ಹೋಗಿದ್ದ ಬಸವರಾಜ, ವಸತಿ ಗೃಹದ ಆವರಣದಲ್ಲಿ ದೇಗುಲದ ಬಳಿ ಮಲಗಿದ್ದರು. ಕುಟುಂಬಸ್ಥರು ಊಟಕ್ಕೆ ಎಬ್ಬಿಸಲು ಹೋದಾಗ ಅವರು ಎದ್ದಿಲ್ಲ. ತಕ್ಷಣ ಕುಟುಂಬಸ್ಥರು ಅವರನ್ನು ಲಕ್ಷೇಶ್ವರ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟೊತ್ತಿಗಾಗಲೇ ಬಸವರಾಜ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಎಎಸ್‌ಐ ಬಸವರಾಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ.