ಹುಬ್ಬಳ್ಳಿ :ರಾಜ್ಯಾದ್ಯಂತಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿದ್ದಾರೆ. ಆದರೆ, ಹುಬ್ಬಳ್ಳಿ-ಧಾರವಾಡ ಕಮಿಷನರ್ ಅವರು ಸಾರ್ವಜನಿಕರ ಮೇಲೆ ಕೈ ಮಾಡಬಾರದು ಎಂಬ ಆದೇಶ ನೀಡಿದ್ದರೂ ಸಹ ಎಎಸ್ಐ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಜಾರಿ ಇದ್ದರೂ, ಬೇಕಾಬಿಟ್ಟಿ ಓಡಾಡುತ್ತಿದ್ದಾನೆ ಎಂದು ಆರೋಪಿಸಿರುವ ಪೊಲೀಸರು ಯುವಕನಿಗೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಯುವಕನಿಗೆ ಹೊಡೆದ ಪರಿಣಾಮ ಮುಖದ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.