ಹುಬ್ಬಳ್ಳಿ:ಪಶ್ಚಿಮ ಪಧವೀದರ ಕ್ಷೇತ್ರ ಸೇರಿದಂತೆ ಉಪ ಚುನಾವಣೆಯ ದಿನಾಂಕ ಪ್ರಕಟಗೊಂಡ ನಂತರ ನೀತಿ ಸಂಹಿತೆಯಿಂದ ಶಿಕ್ಷಕರ ವರ್ಗಾವಣೆ ಸ್ಥಗಿತಗೊಂಡಿದೆ. ಇದು ಶಿಕ್ಷಕರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನರ ಒತ್ತಾಯ ಮಾಡಿದ್ದಾರೆ.
ಶಿಕ್ಷಕರ ವರ್ಗಾವಣೆ ಸ್ಥಗಿತಗೊಂಡಿದ್ದರಿಂದ ತೀವ್ರ ತೊಂದರೆಯಾಗ್ತಿದೆ: ಅಶೋಕ ಸಜ್ಜನರ - Teacher transfer breakdown
ವರ್ಗಾವಣೆಗಾಗಿ ಎಲ್ಲ ಶಿಕ್ಷಕರು ಕಾದಿದ್ದಾರೆ. ಇನ್ನು ತೀವ್ರತರ ಕಾಯಿಲೆಯುಳ್ಳವರು, ವಿಕಲ ಚೇತನರು, ಪತಿ ಪತ್ನಿಯರು ಹಾಗೂ ವಿಧವೆಯರು ಹತಾಶರಾಗಿದ್ದಾರೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನರ ತಿಳಿಸಿದ್ದಾರೆ.
ಅಶೋಕ ಸಜ್ಜನರ
ಈ ಕುರಿತು ಮಾತನಾಡಿದ ಅವರು, ವರ್ಗಾವಣೆಯು ಕಳೆದ ಐದು ರ್ಷಗಳಲ್ಲಿ ಒಂದು ಬಾರಿ ಮಾತ್ರ ನಡೆದಿದೆ. ವರ್ಗಾವಣೆಗಾಗಿ ಎಲ್ಲ ಶಿಕ್ಷಕರು ಕಾದಿದ್ದಾರೆ. ಇನ್ನು ತೀವ್ರತರ ಕಾಯಿಲೆಯುಳ್ಳವರು, ವಿಕಲ ಚೇತನರು, ಪತಿ ಪತ್ನಿಯರು ಹಾಗೂ ವಿಧವೆಯರು ಹತಾಶರಾಗಿದ್ದಾರೆ. ಈ ದಿಸೆಯಲ್ಲಿ ಶಿಕ್ಷಕರ ವರ್ಗಾವಣೆಗಳು ಕೌನ್ಸೆಲಿಂಗ್ ಮೂಲಕ ಹಾಗೂ ಕೋರಿಕೆ ಮತ್ತು ಪರಸ್ಪರ ಮಾತ್ರ ಮಾಡಬೇಕು, ಈ ಚುನಾವಣಾ ನೀತಿ ಸಂಹಿತೆಯಿಂದ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡದೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮಾನ್ಯ ಅಧಿಕಾರಿಗಳಿಗೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಮನವಿ ಮಾಡಿದ್ದಾರೆ.