ಧಾರವಾಡ :ಮಾಸಿಕ 12 ಸಾವಿರ ವೇತನ ಹಾಗೂ ಸುರಕ್ಷತಾ ಕಿಟ್ ನೀಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಡೆಸುತ್ತಿರುವ ಪ್ರತಿಭಟನೆ ಇಂದು 11ನೇ ದಿನಕ್ಕೆ ಕಾಲಿಟ್ಟಿದೆ.
11ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ - Asha workers protest
ಮಾಸಿಕ 12 ಸಾವಿರ ವೇತನ ಹಾಗೂ ಸುರಕ್ಷತಾ ಕಿಟ್ ನೀಡುವಂತೆ 11 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ಕೂಡ ಸರ್ಕಾರ ನಮ್ಮ ಸಮಸ್ಯೆ ಕುರಿತು ಮಾತನಾಡುತ್ತಿಲ್ಲ ಎಂದು ಆಶಾಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
11ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ನಾವು ಹಗಲು-ರಾತ್ರಿ ಎನ್ನದೆ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮಾಸಿಕ 12 ಸಾವಿರ ವೇತನ ಹಾಗೂ ಸುರಕ್ಷತಾ ಕಿಟ್ ನೀಡುವಂತೆ 11 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ಕೂಡ ಸರ್ಕಾರ ನಮ್ಮ ಸಮಸ್ಯೆ ಕುರಿತು ಮಾತನಾಡುತ್ತಿಲ್ಲ.
ಹೀಗಾಗಿ, ಸರ್ಕಾರ ನಮ್ಮ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.