ಕರ್ನಾಟಕ

karnataka

ETV Bharat / state

ಬೆಲ್ಲದ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ.. ಇದರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ್ ಜೋಶಿ - ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿಕೆ

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಲವರು ವೈಯಕ್ತಿಕ ಹಾಗೂ ಖಾಸಗಿ ಕಾರ್ಯಕ್ರಮಕ್ಕೆ ದೆಹಲಿ ಹೋಗುತ್ತಾರೆ. ಅದನ್ನೇ ಭಿನ್ನಮತ ಎಂದು ಹೇಳಲಾಗದು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿದರು.

Union Minister  Pralhad Joshi
ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

By

Published : Jun 12, 2021, 4:52 PM IST

ಹುಬ್ಬಳ್ಳಿ:ಶಾಸಕಅರವಿಂದ ಬೆಲ್ಲದ ಅವರು ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಅಲ್ಲದೇ ಅವರ ಪತ್ನಿಯವರ ಸಂಬಂಧಿಕರು ಬಹಳಷ್ಟು ಜನರು ದೆಹಲಿಯಲ್ಲಿ ಇರುವುದರಿಂದ ಸ್ವಾಭಾವಿಕವಾಗಿ ದೆಹಲಿಗೆ ಹೋಗಿದ್ದಾರೆ. ಇದನ್ನೇ ಭಿನ್ನಮತ ಎಂದರೆ ಏನು ಹೇಳುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಲ್ಲದ ಅವರು ನನಗೆ ವಾಟ್ಸ್​​ ಆ್ಯಪ್ ಮೆಸೇಜ್ ಕಳಿಸಿದ್ದಾರೆ. ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ ಎಂದಿದ್ದಾರೆ. ಸುಮಾರು ಜನರು ವೈಯಕ್ತಿಕ ಹಾಗೂ ಖಾಸಗಿ ಕಾರ್ಯಕ್ರಮಕ್ಕೆ ದೆಹಲಿ ಹೋಗುತ್ತಾರೆ. ಅದನ್ನೇ ಭಿನ್ನಮತ ಎಂದು ಹೇಳಲಾಗದು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

ಬಿಜೆಪಿ ಪಕ್ಷದ ಸಚಿವರು ಕೂಡ ವಿರೋಧ ಪಕ್ಷದವರ ಹಾಗೆಯೇ ಕೆಲಸ ಮಾಡಬೇಕು ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಈಗ ಕೋವಿಡ್ ನಿರ್ವಹಣೆ ಬಗ್ಗೆ ಆದ್ಯತೆ ಕೊಡಬೇಕಿದೆ. ಯಾರು ಕೂಡ ಮಾಧ್ಯಮಕ್ಕೆ ಹೋಗಬೇಡಿ ಎಂದು ಹೇಳಿದ್ದೇವೆ. ಹಾಗೇ ಯಾರು ಮಾತನಾಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಇಂತಹವುಗಳಿಗೆ ಎಲ್ಲರೂ ಪೂರ್ಣ ವಿರಾಮ ಇಟ್ಟು ಜನರ ಹಿತಾಸಕ್ತಿ ಕಾಪಾಡುವ ಮೂಲಕ ರಾಜಕಾರಣದ ಸಾರ್ಥಕತೆ ಮಾಡಿಕೊಳ್ಳಬೇಕು ಎಂದರು.

ಸರ್ಕಾರ ಎಲ್ಲ ರೀತಿಯಿಂದ ಒಳ್ಳೆ ಕೆಲಸ ಮಾಡ್ತಿದೆ:

ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ಅವರನ್ನು ಬದಲಾಯಿಸುವ ಪ್ರಶ್ನೆಯಿಲ್ಲ. ರಾಜ್ಯ ಉಸ್ತುವಾರಿ ಅರುಣ ಸಿಂಗ್ ಕೂಡ ಹೇಳಿದ್ದಾರೆ. ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರೇ ವಿರೋಧ ಪಕ್ಷದವರಾಗಿ ಕೆಲಸ ಮಾಡೋ ಅನಿವಾರ್ಯತೆ ಇದೆ ಅನ್ನೋ ಮಾತನ್ನು ಒಪ್ಪಲ್ಲ ಎಂದರು.

ಅಧಿಕಾರವೊಂದೇ ಅಂತಿಮವಲ್ಲ:

ರಾಜಕಾರಣದಲ್ಲಿ ಬರೀ ಅಧಿಕಾರವೊಂದೇ ಅಂತಿಮವಲ್ಲ. ಅಧಿಕಾರದಲ್ಲಿ ಇರೋರು ವಿಶೇಷವಾಗಿ ಜನರ ಕಣೀರನ್ನು ಒರೆಸುವುದನ್ನು ಪ್ರಥಮ ಆದ್ಯತೆಯನ್ನಾಗಿಸಿಕೊಳ್ಳಬೇಕು. ನಾಯಕತ್ವ ಬದಲಾವಣೆ ಚರ್ಚೆಗೆ ಎಲ್ಲರೂ ಪೂರ್ಣ ವಿರಾಮ ಹಾಡಬೇಕು. ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ. ಅದನ್ನು ಮುಖ್ಯಮಂತ್ರಿಗಳು, ರಾಷ್ಟ್ರೀಯ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಓದಿ:ದೆಹಲಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಅರವಿಂದ ಬೆಲ್ಲದ

ABOUT THE AUTHOR

...view details