ಧಾರವಾಡ :ಕೊರೊನಾ ವೈರಸ್ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿದೆ. ಈ ನಡುವೆ ಮುಂದಿನ ತಿಂಗಳು ಗಣೇಶ ಹಬ್ಬ ಆಗಮಿಸುತ್ತಿದೆ. ಈ ಕುರಿತು ಗಣಪತಿ ಮೂರ್ತಿ ತಯಾರಿಸುವ ಕಲಾವಿದರು ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ನಡುವೆ ಗಣಪನ ಹೊಸ ಅವತಾರ.. ಎಸ್ಎಂಎಸ್ ಮೂರ್ತಿ ತಯಾರಿಸಿದ ಕಲಾವಿದ ಧಾರವಾಡದ ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಎಂಬುವರು ಎಸ್‌ಎಂಎಸ್ (ಸ್ಯಾನಿಟೈಸರ್, ಮಾಸ್ಕ್, ಸೋಶಿಯಲ್ ಡಿಸ್ಟೆನ್ಸ್) ಗಣಪತಿ ತಯಾರಿಸಿ ಜಾಗೃತಿ ಸಂದೇಶ ಸಾರಲು ಮುಂದಾಗಿದ್ದಾರೆ.
ಕೊರೊನಾ ಜಾಗೃತಿಯ ಮೂರು ಸಂದೇಶದ ಗಣಪತಿ ತಯಾರಿಸಿದ್ದು, ಕೈಯಲ್ಲಿ ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್ ಹಾಗೂ 6 ಅಡಿ ಅಂತರದ ಛತ್ರದಡಿ ಗಣೇಶ ಮೂರ್ತಿ ತಯಾರಿಸಿ ಜಾಗೃತಿ ಸಂದೇಶ ಸಾರುತ್ತಿದ್ದಾರೆ.
ಈ ಬಾರಿ ಆಚರಿಸುವ ಗಣೇಶೋತ್ಸವ ಪರಿಸರ ಸ್ನೇಹಿಯಾಗಿ ಹಾಗೂ ಆರೋಗ್ಯ ಸ್ನೇಹಿಯಾಗಿಯೂ ಇರಲಿ ಎಂದು ಮಂಜುನಾಥ ಹಿರೇಮಠ ಅವರು ಈ ವಿಶೇಷ ರೀತಿಯ ಎಸ್ಎಂಎಸ್ ಗಣೇಶನನ್ನು ತಯಾರಿಸಿದ್ದಾರೆ.