ಹುಬ್ಬಳ್ಳಿ: ಇಲ್ಲಿನ ಹೊರವಲಯದಲ್ಲಿ ಕಟ್ಟಡ ಕಾಮಗಾರಿಗೆಂದು ತಂದು ಹಾಕಿದ್ದ ಕಬ್ಬಿಣದ ರಾಡ್ಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರುತಿ ಬಸಪ್ಪ, ಅರಣ ಶಿಕಾರಿ, ಮತ್ತು ಪೀರ್ಸಾಬ್ ಮಾಬುಸಾಬ್ ಕೊಲ್ಕರ್ ಬಂಧಿತ ಆರೋಪಿಗಳು. ಸುಮಾರು 85,000 ಬೆಲೆಬಾಳುವ ಕಬ್ಬಿಣದ ರಾಡುಗಳು ಮತ್ತು ಐದು ಲಕ್ಷ ಬೆಲೆಬಾಳುವ ವಾಹನವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.