ಕರ್ನಾಟಕ

karnataka

ETV Bharat / state

ಹಾರ್ಡ್‌ವೇರ್‌ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ - Hubli theft arrest news

ಹುಬ್ಬಳ್ಳಿ ಹಾರ್ಡ್‌ವೇರ್‌ ಅಂಗಡಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 2,06,650 ರೂ. ಮೌಲ್ಯದ ಹಾರ್ಡ್‌ವೇರ್‌ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Arrest
Arrest

By

Published : Jun 29, 2020, 11:43 AM IST

ಹುಬ್ಬಳ್ಳಿ: ನಗರದ ಹಾರ್ಡ್‌ವೇರ್‌ ಅಂಗಡಿಗಳ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗದಗ ಬೆಟಗೇರಿ ನಿವಾಸಿ ಜಗದೀಶ ಚಂದ್ರಶೇಖರ ನಾಯ್ಕರ್​ (55) ಬಂಧಿತ ಆರೋಪಿ. ಈತ ಹಾರ್ಡ್‌ವೇರ್‌ ಅಂಗಡಿಗಳಿಗೆ ಹಾಕಿದ ಕೀಲಿಯನ್ನು ರಾತ್ರಿ ವೇಳೆ ಮುರಿದು, ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತನಿಂದ 2,06,650 ರೂ. ಮೌಲ್ಯದ ಹಾರ್ಡ್‌ವೇರ್‌ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಪನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್. ಕೆ. ಹೊಳೆಣ್ಣವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿ ಎಸ್ ಐ ಬಿ.ಕೆ. ಹೂಗಾರ ಹಾಗೂ ಸಿಬ್ಬಂದಿ ಎಸ್.ಎಸ್ ಪಾಂಡೆ, ಎಂ.ಬಿ. ಧನಿಗೊಂಡ ಮುಂತಾದವರು ಭಾಗಿಯಾಗಿದ್ದರು.

ABOUT THE AUTHOR

...view details