ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಮೂವರು ಅಂತಾರಾಜ್ಯ ಕಳ್ಳರ ಬಂಧನ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ - Arrest of three interstate thieves in Hubli update

ಹು-ಧಾ ಅವಳಿ ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್​ ಮಾಡಿ ಕೈಚಳಕ ತೋರಿಸುತ್ತಿದ್ದ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರೆಲ್ಲ ಅಂತಾರಾಜ್ಯ ಕಳ್ಳರಾಗಿದ್ದಾರೆ.

ಮೂವರು ಅಂತರರಾಜ್ಯ ಕಳ್ಳರ ಬಂಧನ

By

Published : Nov 24, 2019, 5:25 PM IST

ಹುಬ್ಬಳ್ಳಿ:ಮನೆ ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ರಮೇಶ ಲಕ್ಷ್ಮಣ ಕಾಳೆ, ಸುರೇಶ ಗಂಗಾರಾಮ ದೌಲತ್, ಅಪ್ಪಾ ದೌಲತ್ ಚವ್ಹಾಣ ಬಂಧಿತ ಆರೋಪಿಗಳು. ಹಲವು ದಿನಗಳಿಂದ ಹು-ಧಾ ಅವಳಿನಗರದಲ್ಲಿ ಬೀಗ ಹಾಕಿದ ಮನೆಗಳಿಗೆ ಹೋಗಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿ ಮೇರೆಗೆ ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಆರ್. ದೀಲಿಪ್, ಡಿಸಿಪಿ ನಾಗೇಶ್​ ಡಿ.ಎಲ್, ಎಸಿಪಿ ಶಂಕರ್​ ರಾಗಿ ಮಾರ್ಗದರ್ಶನದಲ್ಲಿ ತಂಡವೊಂದನ್ನು ರಚಿಸಿಕೊಂಡಿದ್ದ ಕೇಶ್ವಾಪುರ ಠಾಣೆಯ ಪೊಲೀಸರು ಅಧಿಕಾರಿಗಳಾದ ಸುರೇಶ ಕುಂಬಾರ, ಸಚಿನ್​ ದಾಸರೆಡ್ಡಿ, ಬಿ.ಬಿ.ಹಾದಿಮನಿ ನೇತೃತ್ವದಲ್ಲಿ ಮೂವರು ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರಿಂದ 2,75,200 ಮೌಲ್ಯದ ಚಿನ್ನಾಭರಣ ಹಾಗೂ 20,000 ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತರಾದ ಆರ್.ದೀಲಿಪ್ ಬಹುಮಾನ ಘೋಷಿಸಿದ್ದಾರೆ.

ABOUT THE AUTHOR

...view details