ಕರ್ನಾಟಕ

karnataka

ETV Bharat / state

ಖತರ್ನಾಕ್ ಕಳ್ಳ ಫೈರೋಜ್ ಜಫ್ರಿ‌ ಬಂಧನ - Hubli thief arrest news

ಹುಬ್ಬಳ್ಳಿಯ ವಿನಾಯಕ ಮೆಡಿಕಲ್ ಶಾಪ್ ಹಾಗೂ ಮಂತ್ರಾ ಹೋಟೆಲ್ ಬಳಿ ಇರುವ ಸಸ್ಯಹಾರಿ ಹೋಟೆಲ್ ನಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪನಗರ ಠಾಣೆ
ಉಪನಗರ ಠಾಣೆ

By

Published : Aug 14, 2020, 11:23 AM IST

ಹುಬ್ಬಳ್ಳಿ: ಮೆಡಿಕಲ್ ಶಾಪ್ ಮತ್ತು ಹೋಟೆಲ್ ಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಕೊನೆಗೂ ಉಪನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಫೈರೋಜ್ ಜಫ್ರಿ (38) ಬಂಧಿತ ಆರೋಪಿ. ಈತನಿಂದ 30,300 ರೂ. ನಗದು, ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕ್ಲಬ್ ರಸ್ತೆಯ ವಿನಾಯಕ ಮೆಡಿಕಲ್ ಶಾಪ್ ಹಾಗೂ ಮಂತ್ರಾ ಹೋಟೆಲ್ ಬಳಿ ಇರುವ ಸಸ್ಯಹಾರಿ ಹೋಟೆಲ್ ನಲ್ಲಿ ಕಳ್ಳತನ ಮಾಡಿದ ಕುರಿತು ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details