ಕರ್ನಾಟಕ

karnataka

ETV Bharat / state

ಪುರಾತನ ವಿಗ್ರಹವೆಂದು ನಂಬಿಸಿ ಮಾರಲು ಯತ್ನಿಸಿದ 6 ಜನರ ಬಂಧನ - ಹುಬ್ಬಳ್ಳಿಯಲ್ಲಿಪುರಾತನ ವಿಗ್ರಹವೆಂದು ನಂಬಿಸಿ ಮಾರಲು ಯತ್ನ

ಪುರಾತನ ಎಂದು ಹೇಳಲಾದ ಲಕ್ಷ್ಮಿ ವಿಗ್ರಹವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಆರು ಜನರನ್ನ ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ.

ಪುರಾತನ ವಿಗ್ರಹವೆಂದು ನಂಬಿಸಿ ಮಾರಲು ಯತ್ನಿಸಿದ 6 ಜನರ ಬಂಧನ
ಪುರಾತನ ವಿಗ್ರಹವೆಂದು ನಂಬಿಸಿ ಮಾರಲು ಯತ್ನಿಸಿದ 6 ಜನರ ಬಂಧನ

By

Published : Nov 24, 2020, 9:50 AM IST

ಹುಬ್ಬಳ್ಳಿ:ಪುರಾತನ ವಿಗ್ರಹವೆಂದು ನಂಬಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ತಂಡವನ್ನ ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೈರಿದೇವರಕೊಪ್ಪದ ಬಳಿ ಕಾರಿನಲ್ಲಿ ಪುರಾತನ ಎಂದು ಹೇಳಲಾದ ಲಕ್ಷ್ಮಿ ವಿಗ್ರಹವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಆರು ಜನರನ್ನ ಬಂಧನ ಮಾಡಲಾಗಿದೆ.

ವಿಗ್ರಹ

ಬಂಧಿತರನ್ನ ವಿಜಯಪುರ ಮುಬಾರಕ ಚೌಕ ನಿವಾಸಿ ಹುಸೇನ್​ ಸಾಬ್​​ ಮಳ್ಳಿ, ವಿಜಯಪುರ ಬಬಲೇಶ್ವರ ನಾಕಾದ ಬಾಬು ಜಾಧವ, ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದ ಲಕ್ಷ್ಮಣ ಹಾದಿಮನಿ, ಬೆಳಗಾವಿಯ ಬಸವರಾಜ ಮುತಗೇಕರ, ವಿಜಯಪುರ ಆಳಂದದ ಜಳಕಿ ಗ್ರಾಮದ ರಾಜು ಶಿಂಧೆ ಹಾಗೂ ವಿಜಯಪುರ ಝಂಡಾಕಟ್ಟಿಯ ಇರ್ಫಾನ ನಬಿವಾಲೆ ಬಂಧಿತ ಆರೋಪಿಗಳು.

ಬಂಧಿತರಿಂದ ಎರಡು ಕಾರು ಹಾಗೂ ಪುರಾತನ ಎಂದು ಹೇಳಲಾದ ವಿಗ್ರಹವನ್ನ ವಶಕ್ಕೆ ಪಡೆಯಲಾಗಿದೆ.

For All Latest Updates

TAGGED:

ABOUT THE AUTHOR

...view details