ಕರ್ನಾಟಕ

karnataka

ETV Bharat / state

ಏಪ್ರಿಲ್‌ 9ಕ್ಕೆ ಹುಬ್ಬಳ್ಳಿಗೆ ಹ್ಯಾಟ್ರಿಕ್‌ ಹೀರೋ.. ಫ್ಯಾನ್ಸ್‌ ಜತೆ 'ಕವಚ'ವೀಕ್ಷಿಸುವ ಶಿವಣ್ಣ - ನಟ ಶಿವರಾಜ್​ಕುಮಾರ್

ಏ.9ಕ್ಕೆ ಹುಬ್ಬಳ್ಳಿಗೆ ನಟ ಶಿವರಾಜ್​ಕುಮಾರ್ ಆಗಮಿಸಿ ಅಭಿಮಾನಿಗಳ ಜೊತೆ 'ಕವಚ' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದು ಡಾ‌. ರಾಜ್​ಕುಮಾರ್ ಅಭಿಮಾನಿಗಳ ಬಳಗ ತಿಳಿಸಿದೆ.

ಡಾ‌. ರಾಜ್​ಕುಮಾರ್ ಅಭಿಮಾನಿಗಳ ಬಳಗ ಸಂಘ

By

Published : Apr 7, 2019, 8:39 PM IST

ಹುಬ್ಬಳ್ಳಿ:ಏಪ್ರಿಲ್ 9ರಂದು ಕವಚ ಚಲನಚಿತ್ರದ ತಂಡದೊಂದಿಗೆ ಪದ್ಮಾ ಹಾಗೂ ಅಪ್ಸರಾ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಜೊತೆ ನಾಯಕ ನಟ ಶಿವರಾಜ್​ಕುಮಾರ್ 'ಕವಚ' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದು ಡಾ‌. ರಾಜ್​ಕುಮಾರ್ ಅಭಿಮಾನಿಗಳ ಬಳಗ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣನವರ ಹೇಳಿದರು.

ಡಾ‌. ರಾಜ್​ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಏ.9ರಂದು ಮಧ್ಯಾಹ್ನ 12ಕ್ಕೆ ಶಿವರಾಜ್​ಕುಮಾರ್ ಆಗಮಿಸಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಅಭಿಮಾನಿಗಳ ಜೊತೆ ಮೆರವಣಿಗೆಯೊಂದಿಗೆ ಚಿತ್ರ ಮಂದಿರಕ್ಕೆ ತೆರಳಿ ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಅಂದು ಕವಚ ಚಿತ್ರದ ನಿರ್ಮಾಪಕ ಶ್ರೀಕಾಂತ್, ಸುಧೀರ, ನಟ ವಶಿಷ್ಠ ಸಿಂಹ, ವಿಆರ್​ಎಸ್ ವಾಸು ಮುಂತಾದವರು ಆಗಮಿಸಲಿದ್ದಾರೆ ಎಂದರು. ಇದೇ ವೇಳೆ ಉತ್ತರ ಕರ್ನಾಟಕ ಕಲಾವಿದರಿಗೆ ಸೂಕ್ತ ಸ್ಥಾನ ಮಾನ ಚಿತ್ರರಂಗದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಶೀಘ್ರವೇ ಉತ್ತರ ಕರ್ನಾಟಕ ಕಲಾವಿದರ ಸಂಘ ರಚನೆ ಮಾಡಲಾಗುವುದು ಎಂದರು.

ABOUT THE AUTHOR

...view details