ಕರ್ನಾಟಕ

karnataka

ETV Bharat / state

ಕಲಘಟಗಿ: ಜಂಗಮ, ಅರ್ಚಕರು, ಪುರೋಹಿತರಿಗೆ ನೆರವಾಗುವಂತೆ ಸಿಎಂಗೆ ಮನವಿ - Kalagatagi darwada latest news

ಕೊರೊನಾ ಹಿನ್ನೆಲೆ ಸರ್ಕಾರ ಅರ್ಚಕರ, ಪುರೋಹಿತರ ಸಹಾಯಕ್ಕಾಗಿ ತಕ್ಷಣ ಧಾವಿಸಲು ಮುಂದಾಗಬೇಕು..

Jangama community
Jangama community

By

Published : Jul 3, 2020, 6:16 PM IST

ಕಲಘಟಗಿ(ಧಾರವಾಡ):ಲಾಕ್‍ಡೌನ್‌ನಿಂದ ಜಂಗಮ ಅರ್ಚಕ ಮತ್ತು ಪುರೋಹಿತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸಹಾಯ ಹಸ್ತ ಕೋರಿ ತಾಲೂಕಿನ ಜಂಗಮ ಅರ್ಚಕ-ಪುರೋಹಿತರ ಸಂಘದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹನ್ನೆರಡು ಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಅವರ ಮೂಲಕ ಇಂದು ಮನವಿ ಸಲ್ಲಿಸಿದರು.

ತಾಲೂಕಿನಲ್ಲಿನ ಧಾರ್ಮಿಕ ಕಾರ್ಯ ಕೈಗೊಳ್ಳುತ್ತಾ ಬಂದು ತಮ್ಮ ಜೀವನೋಪಾಯವನ್ನು ಹುಡುಕಿಕೊಂಡ ಅರ್ಚಕ, ಪುರೋಹಿತರ ಕುಟುಂಬಗಳು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಹಿನ್ನೆಲೆ, ದೇವಸ್ಥಾನಗಳು, ಸಭೆ ಸಮಾರಂಭಗಳು, ಪೂಜಾ ಧಾರ್ಮಿಕ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಬಡ ಅರ್ಚಕರು ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ ಸರ್ಕಾರ ಅರ್ಚಕರ, ಪುರೋಹಿತರ ಸಹಾಯಕ್ಕಾಗಿ ತಕ್ಷಣ ಧಾವಿಸಲು ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.


ಈ ವೇಳೆ ಗೌರವ ಅಧ್ಯಕ್ಷ ಶೇಖರಯ್ಯ,ಅಧ್ಯಕ್ಷ ಎಂ ಕೆ ಹಿರೇಮಠ, ಕಾರ್ಯದರ್ಶಿ ಚನ್ನಬಸಯ್ಯ ಚಿಕ್ಕಮಠ ಹಾಗೂ ಅರ್ಚಕರು, ಪುರೋಹಿತರು ಇದ್ದರು.

ABOUT THE AUTHOR

...view details