ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಇಂದು ಜರುಗಿತು. ಅಧ್ಯಕ್ಷರಾಗಿ ಸಹದೇವಪ್ಪ ಸಡಕೆನ್ನವರ 11 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಸವರಾಜ ನಾಯ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಹಶೀಲ್ದಾರ್ ಮತ್ತು ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಶಾಂತಿಯುತವಾಗಿ ನಡೆಯಿತು.
ಎಪಿಎಂಸಿ ಚುನಾವಣಾ ಫಲಿತಾಂಶ: ಅಧ್ಯಕ್ಷರಾಗಿ ಸಡಕೆನ್ನವರ, ಉಪಾಧ್ಯಕ್ಷರಾಗಿ ನಾಯ್ಕರ್ ಆಯ್ಕೆ - Sahadevappa Sadekennavar
ಹುಬ್ಬಳ್ಳಿ ನಗರದ ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಶಾಂತಿಯುತವಾಗಿ ಜರುಗಿತು. ಅಧ್ಯಕ್ಷರಾಗಿ ಸಹದೇವಪ್ಪ ಸಡಕೆನ್ನವರ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ನಾಯ್ಕರ್ ಆಯ್ಕೆಯಾಗಿದ್ದಾರೆ.
![ಎಪಿಎಂಸಿ ಚುನಾವಣಾ ಫಲಿತಾಂಶ: ಅಧ್ಯಕ್ಷರಾಗಿ ಸಡಕೆನ್ನವರ, ಉಪಾಧ್ಯಕ್ಷರಾಗಿ ನಾಯ್ಕರ್ ಆಯ್ಕೆ APMC Election](https://etvbharatimages.akamaized.net/etvbharat/prod-images/768-512-7958510-209-7958510-1594295186159.jpg)
ಎಪಿಎಂಸಿ ಚುನಾವಣೆ
ಚುನಾವಣೆ ವೇಳಾಪಟ್ಟಿಯಂತೆ 17 ಸದಸ್ಯರಲ್ಲಿ ಮೂರು ಜನರು ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಿ, ಫಲಿತಾಂಶವನ್ನು ತಹಶೀಲ್ದಾರ್ ಪ್ರಕಟಿಸಿದ್ದಾರೆ.