ಕರ್ನಾಟಕ

karnataka

ETV Bharat / state

ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಸಂಬಂಧ ಇನ್ನೊಂದು ಡಿಪಿಆರ್ ಸಲ್ಲಿಸಲಾಗುವುದು: ಶೆಟ್ಟರ್​​ - One year for the BJP government

ರೈತರ ಬಹು ದಶಕದ ಬಯಕೆಯಾಗಿರುವ ಕಳಸಾ-ಬಂಡೂರಿ ಹಾಗೂ ಮಹಾದಾಯಿ ನಾಲಾ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಈಗಾಗಲೇ ಆಗಿದ್ದು, ಅದರನ್ವರ ಹೊಸ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

Another DPR will be submitted for center for kalas banduri and mahadayi issue: shetter
ಮಹದಾಯಿ, ಕಳಸಾ ಬಂಡೂರಿ ಯೋಜನೆ ಸಂಬಂಧ ಇನ್ನೊಂದು ಡಿಪಿಆರ್ ಸಲ್ಲಿಸಲಾಗುವುದು: ಶೆಟ್ಟರ್​​

By

Published : Jul 27, 2020, 4:22 PM IST

ಧಾರವಾಡ:ಮಹಾದಾಯಿ,‌ ಕಳಸಾ-ಬಂಡೂರಿ ನಾಲಾ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಡಿಪಿಆರ್ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಸರ್ಕಾರ ಒಂದು ವರ್ಷದ ಪೂರೈಸಿದ ಹಿನ್ನೆಲೆ ನಗರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಗೆಜೆಟ್ ನೋಟಿಫಿಕೇಷನ್ ಈಗಾಗಲೇ ಆಗಿದೆ. ಅದರನ್ವರ ಹೊಸ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದರು.

ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಸಂಬಂಧ ಇನ್ನೊಂದು ಡಿಪಿಆರ್ ಸಲ್ಲಿಸಲಾಗುವುದು: ಶೆಟ್ಟರ್​​

ಅರಣ್ಯ ಭಾಗದಲ್ಲಿ ಕೆಲಸ ಮಾಡಬೇಕಿರುವುದರಿಂದ ಹೊಸ ಡಿಪಿಆರ್ ಪ್ರಸ್ತಾವನೆ ಸಿದ್ಧಪಡಿಸಬೇಕಿದೆ.‌ ಈ ನಿಟ್ಟಿನಲ್ಲಿ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಕೊರೊನಾದಲ್ಲಿ ಅವ್ಯವಹಾರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶೆಟ್ಟರ್​, ರಾಜ್ಯ ಮತ್ತು ಜಿಲ್ಲಾಮಟ್ಟದ ಬಗ್ಗೆ ಕಾಂಗ್ರೆಸ್ ಆರೋಪ‌ ಮಾಡುತ್ತಿದೆ.‌ ಜಿಲ್ಲಾಡಳಿತ ಮತ್ತು ಸರ್ಕಾರದ ಜೊತೆ ಕಾಂಗ್ರೆಸ್​ನವರು ಕೈಜೋಡಿಸಬೇಕಿತ್ತು. ಒಂದು ರಚನಾತ್ಮಕ ಸಲಹೆ ಸೂಚನೆ ಕೊಟ್ಟು ನೈತಿಕ ಬೆಂಬಲ ಕೊಡಬೇಕಿತ್ತು. ಆದರೆ ಅದು ಬಿಟ್ಟು ಟೀಕೆ ಟಿಪ್ಪಣಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ABOUT THE AUTHOR

...view details