ಕರ್ನಾಟಕ

karnataka

ETV Bharat / state

ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ! - Hubli police

ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಆರೋಪಿ ಕಿರಣ್​ ವೀರನಗೌಡರಗೆ ಉತ್ತರ ಕರ್ನಾಟಕ ಭಾಗದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಪರಿಚಯ ಇದೆ ಎನ್ನಲಾಗ್ತಿದೆ. ಇದನ್ನೇ ಲಾಭವಾಗಿಸಿಕೊಂಡಿರುವ ಈತ ಲಕ್ಷ ಲಕ್ಷ ಡೀಲ್ ಮಾಡಿ ಹಲವು ಕುಟುಂಬಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ.

another-case-of-kiran-veeranga-gowda
ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ!

By

Published : Jun 23, 2021, 3:39 PM IST

Updated : Jun 23, 2021, 10:59 PM IST

ಹುಬ್ಬಳ್ಳಿ:ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಪ್ರಕರಣದ ಬೆನ್ನಲ್ಲೇ ಕಿರಣ್​ ವೀರನಗೌಡರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.‌ ಪೊಲೀಸರ ವೇಷದಲ್ಲಿ ಈತ ಸುಲಿಗೆಗೆ ಇಳಿದಿದ್ದ ಎನ್ನುವ ಮಾಹಿತಿಯನ್ನು ಅನ್ಯಾಯಕೊಳ್ಳಗಾದ ಮಹಿಳೆ ತಡವಾಗಿ ಬಹಿರಂಗಪಡಿಸುವ ಮೂಲಕ‌ ಈತನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾಳೆ.

ಕಳೆದ ವರ್ಷ ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್​ವೊಂದರ ಮೇಲೆ ಅಸಲಿ ಪೊಲೀಸರ ರೀತಿ ನಕಲಿ ಪೊಲೀಸರು ದಾಳಿ‌ ನಡೆಸಿದ್ದರು. ಇದರ ರೂವಾರಿನೇ ಕಿರಣ್ ವೀರನಗೌಡರ. ತಾನು ಡಿಸಿಪಿಯೆಂದು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದ. ಈತನಿಗೆ ಹುಬ್ಬಳ್ಳಿಯ ಓರ್ವ ಎಎಸ್​ಐ, ಪಿಸಿ ಸಾಥ್ ನೀಡಿದ್ದರು. ನಕಲಿ ಪೊಲೀಸರ ಜೊತೆ ಸೇರಿ ಅಸಲಿ ಪೊಲೀಸರು ಎಸಿಪಿ, ಇನ್ಸ್​ಪೆಕ್ಟರ್ ಅಂತ ಹೇಳಿ ಪಾರ್ಲರ್​ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನುಅಪಾರ್ಟ್​​ಮೆಂಟ್​ನಲ್ಲಿ ಕೂಡಿ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮಾಲೀಕ ಹಣ ನೀಡಿದ ಮೇಲೆ ಬಿಟ್ಟು ಕಳುಹಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.
ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ!
Last Updated : Jun 23, 2021, 10:59 PM IST

ABOUT THE AUTHOR

...view details